Select Your Language

Notifications

webdunia
webdunia
webdunia
webdunia

ಟಿಪ್ಪು ಪರಂಪರೆ ಅಳಿಸಲು ಸಾಧ್ಯವೇ ಇಲ್ಲ : ಓವೈಸಿ

ಟಿಪ್ಪು ಪರಂಪರೆ ಅಳಿಸಲು ಸಾಧ್ಯವೇ ಇಲ್ಲ : ಓವೈಸಿ
ನವದೆಹಲಿ , ಸೋಮವಾರ, 10 ಅಕ್ಟೋಬರ್ 2022 (10:50 IST)
ನವದೆಹಲಿ : ಬಿಜೆಪಿಯಿಂದ ಟಿಪ್ಪು ಪರಂಪರೆಯನ್ನು ಅಳಿಸಲು ಸಾಧ್ಯವೇ ಇಲ್ಲ ಎಂದು ಹೈದರಾಬಾದ್ ಸಂಸದ ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಎಚ್ಚರಿಸಿದ್ದಾರೆ.

ಬೆಂಗಳೂರು – ಮೈಸೂರು ಸಂಪರ್ಕ ಕಲ್ಪಿಸುವ ರೈಲಿಗೆ ಟಿಪ್ಪು ಎಕ್ಸ್ಪ್ರೆಸ್ ಹೆಸರಿಗೆ ಬದಲಾಗಿ ಒಡೆಯರ್ ಎಕ್ಸ್ಪ್ರೆಸ್ ಎಂದು ಮರುನಾಮಕರಣ ಮಾಡಿರುವ ವಿಚಾರಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಓವೈಸಿ, ಬ್ರಿಟಿಷರ ವಿರುದ್ಧ ಟಿಪ್ಪು ಮಾಡಿದ್ದ ಮೂರು ಯುದ್ಧಗಳು ಬಿಜೆಪಿಯನ್ನು ಕೆರಳಿಸಿದೆ. ಅವರು ಬೇಕಿದ್ದರೆ ಇನ್ನೊಂದು ರೈಲಿಗೆ ಒಡೆಯರ್ ಹೆಸರಿಡಬಹುದಿತ್ತು.

ಏನೇ ಮಾಡಿದರೂ ಟಿಪ್ಪು ಪರಂಪರೆಯನ್ನು ಅಳಿಸಲು ಬಿಜೆಪಿಯಿಂದ ಸಾಧ್ಯವಿಲ್ಲ. ಟಿಪ್ಪು ಬದುಕಿದ್ದಾಗ ಬ್ರಿಟಿಷರನ್ನು ಹೆದರಿಸಿದ್ದರು. ಈಗ ಬ್ರಿಟಿಷ್ ಗುಲಾಮರನ್ನು ಎದುರಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ನೆಚ್ಚಿನ ಕ್ರಿಕೆಟಿಗ ರಾಸ್‌ ಟೇಲರ್‌ ಎಂದ ಜೈಶಂಕರ್‌