Publish Date: Mon, 10 Oct 2022 (10:47 IST)
Updated Date: Mon, 10 Oct 2022 (10:42 IST)
ನವದೆಹಲಿ : ನನಗೆ ವೈಯಕ್ತಿಕವಾಗಿ ನೆಚ್ಚಿನ ಆಟಗಾರ ನ್ಯೂಜಿಲೆಂಡ್ ಕ್ರಿಕೆಟಿಗ ರಾಸ್ ಟೇಲರ್ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿಳಿಸಿದರು.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಕ್ರಿಕೆಟ್ ಬಾಂಧವ್ಯವನ್ನು ಶ್ಲಾಘಿಸಿದ ಅವರು, ನಮಗೆ ನ್ಯೂಜಿಲೆಂಡ್ ಎಂದಾಗ ಅನೇಕ ವಿಷಯಗಳು ಮನಸ್ಸಿಗೆ ಬರುತ್ತದೆ.
ಆದರೆ ಅದಕ್ಕೆ ಉತ್ತಮ ಉದಾಹರಣೆಯೆಂದರೆ ಕ್ರಿಕೆಟ್ ಎಂದು ಹೇಳುತ್ತೇನೆ. ಭಾರತ ಹಾಗೂ ನ್ಯೂಜಿಲೆಂಡ್ ದೇಶಗಳು ಕ್ರಿಕೆಟ್ ಕ್ಷೇತ್ರದಲ್ಲಿ ಆರೋಗ್ಯಕರ ಪೈಪೋಟಿಯನ್ನು ಹೊಂದಿವೆ ಎಂದು ಹೇಳಿದರು.