ಮಹಾರಾಷ್ಟ್ರ : 3 ತಿಂಗಳು ವಯಸಿನ ಎರಡು ಹುಲಿ ಮರಿಗಳು ಮೃತಪಟ್ಟಿರುವ ಘಟನೆ ಯವತ್ಮಾಲ್ ಜಿಲ್ಲೆಯ ವನಿ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಇದರಿಂದಾಗಿ ಮಹಾರಾಷ್ಟ್ರದಲ್ಲಿ ಕೇವಲ ಒಂದು ತಿಂಗಳಲ್ಲಿ ಮೃತಪಟ್ಟ ಹುಲಿಗಳ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.ಜನರು ಬೇಟೆಯಾಡುವ ಭೀತಿಯಿಂದ ತಾಯಿ ಹುಲಿ ದೂರಾದ ಕಾರಣ ಎರಡು ಹುಲಿ ಮರಿಗಳು ಮೃತಪಟ್ಟಿದೆ.ಮರಿ ಹುಲಿಗಳು ಓಡಾಡುತ್ತಿರುವುದನ್ನು ಕಂಡ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಸಾಮಾನ್ಯವಾಗಿ ತಾಯಿ ಹುಲಿ ಮರಿಗಳನು ಬಿಟ್ಟು ಎಲ್ಲಿಯೂ ಹೋಗುವುದಿಲ್ಲ. ಕೆಲವು ದಿನಗಳ ಹಿಂದಷ್ಟೇ ಇಲ್ಲಿ ಹಸುವೊಂದು ಹುಲಿ ಬಾಯಿಗೆ ಸಿಕ್ಕ ಕಾರಣ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಹುಲಿ ಬೇಟೆಯ ಭಯದಿಂದ ದೂರಾಗಿರಬಹುದು ಅಥವಾ ಬೇಟೆಯಿಂದ ಸಾವನ್ನಪ್ಪಿರಬಹುದೆಂದು ತಜ್ಞರು ಅಂದಾಜಿಸಿದ್ದಾರೆ.