ಬೆಂಗಳೂರು: ನೂರು ಕಿಮೀ ಸೈಕಲ್ ಓಡಿಸಿ ಸೆಂಚುರಿ ಸೈಕ್ಲಿಸ್ಟ್ ಎಂದೇ ಹೆಸರಾಗಿದ್ದ ಪ್ರಖ್ಯಾತ ಕ್ರೀಡಾಪಟು ಅನಿಲ್ ಕಡ್ಸೂರ್ ಶುಕ್ರವಾರ ಮುಂಜಾನೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.  ಫಿಟ್‌ನೆಸ್ ಟ್ರೈನರ್ ಆಗಿ ಹೆಸರು ಮಾಡಿದ್ದ ಅನಿಲ್ ಕಡೂರ್,  ಅಸಂಖ್ಯಾತ ಯುವಜನತೆ ಮತ್ತು ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಿದ್ದರು. ಅನಿಲ್ ಅವರ ಅಗಲಿಕೆಗೆ ಅವರ ನೂರಾರು ಅಭಿಮಾನಿಗಳು ಹಾಗೂ ಕ್ರೀಡಾಪಟುಗಳು ಸಂತಾಪ ಸೂಚಿಸಿದ್ದಾರೆ.
 
 			
 
 			
			                     
							
							
			        							
								
																	
	
	  ಜ.31 ರಂದು ತಮ್ಮ ಸೈಕಲ್ ಸಾಹಸಗಾಥೆಯ ಬಗ್ಗೆ ಸೋಷಿಯಲ್ ಮಿಡಿಯಾಗಳಲ್ಲಿ ಬರೆದುಕೊಂಡಿದ್ದ ಅನಿಲ್, ಸತತವಾಗಿ 42 ತಿಂಗಳುಗಳಿಂದ ತಾವು ನಡೆಸುತ್ತಿರುವ ಪ್ರತಿದಿನ ಸೈಕಲ್ ರೇಡ್ ಬಗ್ಗೆ ಹಾಗು 1250 ಬಾರಿ ನೂರು ಕಿಮೀ ಸೈಕಲ್ ರೈಡ್ ಮಾಡಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದರು.