Select Your Language

Notifications

webdunia
webdunia
webdunia
webdunia

ಬಂಧನಕ್ಕೆ ಕಾರಣವಾಯ್ತು ಮಗನ ಶಾಲೆ ʼವಾಟ್ಸಾಪ್ ಗ್ರೂಪ್ʼ ಗೆ ಈತ ಕಳುಹಿಸಿದ ಸಂದೇಶ

ಬಂಧನಕ್ಕೆ ಕಾರಣವಾಯ್ತು ಮಗನ ಶಾಲೆ ʼವಾಟ್ಸಾಪ್ ಗ್ರೂಪ್ʼ ಗೆ ಈತ ಕಳುಹಿಸಿದ ಸಂದೇಶ
ಚೆನ್ನೈ , ಮಂಗಳವಾರ, 21 ಸೆಪ್ಟಂಬರ್ 2021 (10:42 IST)
ಚೆನ್ನೈ : ತಮಿಳುನಾಡಿನ ಚೆನ್ನೈನಲ್ಲಿ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. 44 ವರ್ಷದ ವ್ಯಕ್ತಿಯೊಬ್ಬ ಮಗನ ಶಾಲೆಯ ವಾಟ್ಸಾಪ್ ಗುಂಪಿಗೆ ಅಶ್ಲೀಲ ಫೋಟೋಗಳು ಮತ್ತು ವೀಡಿಯೊಗಳನ್ನು ಕಳುಹಿಸಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಈ ಘಟನೆ ಚೆನ್ನೈನ ಆವಡಿಯಲ್ಲಿ ನಡೆದಿದೆ. ಆಕ್ಷೇಪಾರ್ಹ ಫೋಟೋಗಳು ಮತ್ತು ವೀಡಿಯೋಗಳನ್ನು ಶಾಲೆಯ ವಾಟ್ಸಾಪ್ ಗ್ರೂಪ್ಗೆ ಕಳುಹಿಸಿದ ನಂತರ, ಮುಖ್ಯ ಶಿಕ್ಷಕರು ಆರೋಪಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಆರೋಪಿಯ ಮಗ 6 ನೇ ತರಗತಿಯಲ್ಲಿ ಓದುತ್ತಿದ್ದಾನೆ ಎನ್ನಲಾಗಿದೆ.
ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಆತನ ತಪ್ಪು ಸಾಬೀತಾದಲ್ಲಿ ಕಠಿಣ ಕ್ರಮಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ. ಇಂಥಹ ತಪ್ಪುಗಳನ್ನು ಕ್ಷಮಿಸಲಾಗುವುದಿಲ್ಲವೆಂದು ಮುಖ್ಯೋಪಾದ್ಯಾಯರು ಹೇಳಿದ್ದಾರೆ.
ತಪ್ಪಾಗಿ ಫೋಟೋಗಳು ಮತ್ತು ವೀಡಿಯೊಗಳು ಮಗನ ಶಾಲೆಯ ವಾಟ್ಸಾಪ್ ಗುಂಪಿಗೆ ಹೋಗಿವೆ ಎಂದು ಆರೋಪಿ ಹೇಳಿದ್ದಾನೆ. ಗುಂಪಿಗೆ ಫೋಟೋಗಳು ಮತ್ತು ವೀಡಿಯೊಗಳನ್ನು ಕಳುಹಿಸುವುದರ ಹಿಂದೆ ಯಾವುದೇ ಉದ್ದೇಶವಿರಲಿಲ್ಲವೆಂದು ಆತ ಹೇಳಿದ್ದಾನೆ.


Share this Story:

Follow Webdunia kannada

ಮುಂದಿನ ಸುದ್ದಿ

ಸೆಪ್ಟೆಂಬರ್ 24ರ ತನಕ ಕರ್ನಾಟಕದಲ್ಲಿ ಮಳೆ ಮುನ್ಸೂಚನೆ