Select Your Language

Notifications

webdunia
webdunia
webdunia
webdunia

ಸಮಂತಾ ನಟನೆಯ ದಿ ಫ್ಯಾಮಿಲಿ ಮ್ಯಾನ್ 2 ಗೆ ಎದುರಾಗಿದೆ ಸಂಕಷ್ಟ

ಸಮಂತಾ ನಟನೆಯ ದಿ ಫ್ಯಾಮಿಲಿ ಮ್ಯಾನ್ 2 ಗೆ ಎದುರಾಗಿದೆ ಸಂಕಷ್ಟ
ಚೆನ್ನೈ , ಬುಧವಾರ, 26 ಮೇ 2021 (10:02 IST)
ಚೆನ್ನೈ : ಅಮೆಜಾನ್ ಪ್ರೈಮ್ ನಲ್ಲಿ ಪ್ರಸಾರವಾಗಲಿರುವ ವೆಬ್ ಡ್ರಾಮಾ ದಿ ಫ್ಯಾಮಿಲಿ ಮ್ಯಾನ್ 2 ಮೂಲಕ ಸಮಂತಾ ಅಕ್ಕಿನೇನಿ ಡಿಜಿಟಲ್ ಜಗತ್ತಿಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಆದರೆ ಈಗ ಈ ವೆಬ್ ಸರಣಿ ತೊಂದರೆಯಲ್ಲಿ ಸಿಲುಕಿದೆ ಎನ್ನಲಾಗಿದೆ.

ತಮಿಳುನಾಡು ಸರ್ಕಾರದ ಪ್ರಕಾರ  ದಿ ಫ್ಯಾಮಿಲಿ ಮ್ಯಾನ್ 2 ಈಲಂ ತಮಿಳರನ್ನು ಅತ್ಯಂತ ಆಕ್ಷೇಪಾರ್ಹ ರೀತಿಯಲ್ಲಿ ಚಿತ್ರಿಸುತ್ತದೆ. ಹಾಗಾಗಿ ಟಿಎನ್ ಸರ್ಕಾರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಪತ್ರ ಬರೆದು ಒಟಿಟಿ ಪ್ಲಾಟ್ ಫಾರ್ಮ್ ಅಮೆಜಾನ್ ಪ್ರೈಮ್ ನಲ್ಲಿ ಈ ವೆಬ್ ಸರಣಿ ತಮಿಳುನಾಡು ರಾಜ್ಯದಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಬಿಡುಗಡೆಯಾಗದಂತೆ ತಡೆಯಬೇಕು ಎಂದು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನ ಖ್ಯಾತ ನಟನೊಂದಿಗೆ ರೊಮ್ಯಾನ್ಸ್ ಮಾಡುವ ಬಯಕೆ ವ್ಯಕ್ತಪಡಿಸಿದ ನಟಿ ಸಮಂತಾ