Select Your Language

Notifications

webdunia
webdunia
webdunia
webdunia

ಮಗಳನ್ನೇ ಕಬ್ಬಿಣದ ರಾಡ್‍ ನಿಂದ ಹೊಡೆದು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ತಂದೆ

ಮಗಳನ್ನೇ ಕಬ್ಬಿಣದ ರಾಡ್‍ ನಿಂದ ಹೊಡೆದು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ತಂದೆ
ಪಂಜಾಬ್ , ಮಂಗಳವಾರ, 26 ಫೆಬ್ರವರಿ 2019 (06:41 IST)
ಪಂಜಾಬ್ : ನಿವೃತ್ತ ಎಂಜಿನಿಯರ್ ಯೊಬ್ಬ ತನ್ನ ಮಗಳನ್ನೇ ಕಬ್ಬಿಣದ ರಾಡ್‍ ನಿಂದ ಹೊಡೆದು ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ಪಂಜಾಬ್‍ ನ ಅಮೃತಸರದಲ್ಲಿ ನಡೆದಿದೆ.


ನಿಲೋಫರ್(35) ಕೊಲೆಯಾದ ಮಗಳು. ಡೇವಿಡ್ ಮಾಸಿಹ್(60) ಮಗಳನ್ನೇ ಕೊಂದು  ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಎಂಜಿನಿಯರ್. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಈತ ಪೋಷಕರನ್ನು ಭೇಟಿಯಾಗಲು ಬಂದಿದ್ದ ಅನಿವಾಸಿ ಭಾರತೀಯ (ಎನ್‍ಆರ್‍ಐ) ಮಗಳನ್ನು ಮನೆಯಲ್ಲಿ ಯಾರು ಇಲ್ಲದ ವೇಳೆ ಕಬ್ಬಿಣದ ರಾಡ್‍ ನಿಂದ ತಲೆಯ ಮೇಲೆ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ತಾನು ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


ಮನೆಗೆ ಬಂದ ಎಂಜಿನಿಯರ್ ಪತ್ನಿ ಹಾಗೂ ಅಳಿಯ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಕಿಯ ಸಾವಿಗೆ ಕಾರಣವಾಯ್ತು ರಸ್ತೆಯಲ್ಲಿ ಬಿದ್ದಿದ್ದ ಈ ವಸ್ತು