Select Your Language

Notifications

webdunia
webdunia
webdunia
webdunia

ಬಿಜೆಪಿ ಮುಖಂಡನ ಮನೆಗೆ ನುಗ್ಗಿದ ದುಷ್ಕರ್ಮಿಗಳು ಎಸಗಿದ್ದಾರೆ ಇಂತಹ ಘೋರ ಕೃತ್ಯ

ಬಿಜೆಪಿ ಮುಖಂಡನ ಮನೆಗೆ ನುಗ್ಗಿದ ದುಷ್ಕರ್ಮಿಗಳು ಎಸಗಿದ್ದಾರೆ ಇಂತಹ ಘೋರ ಕೃತ್ಯ
ಕೋಲ್ಕತ್ತಾ , ಭಾನುವಾರ, 17 ಫೆಬ್ರವರಿ 2019 (09:16 IST)
ಕೋಲ್ಕತ್ತಾ: ಕೆಲವು ದುಷ್ಕರ್ಮಿಗಳು ಬಿಜೆಪಿ ಮುಖಂಡನೊಬ್ಬನ ಮನೆಗೆ ನುಗ್ಗಿ ಆತನ 22 ವರ್ಷದ ಮಗಳನ್ನು ಕಿಡ್ನ್ಯಾಪ್ ಮಾಡಿದ ಘಟನೆ ಪಶ್ಚಿಮ ಬಂಗಾಳದ ಬರ್ಬಮ್ ಜಿಲ್ಲೆಯಲ್ಲಿ ನಡೆದಿದೆ.

ಬಿಜೆಪಿ ಮುಖಂಡ ಸುಪ್ರಬಾತ್ ಈ ಹಿಂದೆ ಟಿಎಂಸಿಯಲ್ಲಿದಿದ್ದರು. ನಂತರ ಕಳೆದ ಐದು ತಿಂಗಳ ಹಿಂದೆಯಷ್ಟೇ ಭಾರತೀಯ ಜನತಾ ಪಕ್ಷ ಸೇರಿಕೊಂಡಿದ್ದರು. ಆದರೆ ಅವರು ಮನೆಯಲ್ಲಿಲ್ಲದ ವೇಳೆ ಬೆಳಗ್ಗೆ 8ಗಂಟೆಗೆ ಕೆಲ ದುಷ್ಕರ್ಮಿಗಳು ಬಾಗಿಲು ಒಡೆದು ಮನೆಯೊಳಗೆ ನುಗ್ಗಿ ಮನೆಯಲ್ಲಿದ್ದವರಿಗೆ ಬಂದೂಕಿನಿಂದ ಬೆದರಿಸಿ ಮುಖಂಡನ 22 ವರ್ಷದ ಮಗಳನ್ನ ಕಿಡ್ನಾಪ್​ ಮಾಡಿದ್ದಾರೆ.

 

ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಈ ಘಟನೆಯ ಹಿಂದೆ ಯಾವುದೇ ರಾಜಕೀಯ ದುರುದ್ದೇಶ ಕಂಡು ಬರುತ್ತಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ

 


Share this Story:

Follow Webdunia kannada

ಮುಂದಿನ ಸುದ್ದಿ

ಕೇವಲ ಮೂರೂವರೆ ಸಾವಿರ ದುಡ್ಡಿಗಾಗಿ ನೀಚ ವ್ಯಕ್ತಿಯೊಬ್ಬ ಮಾಡಿದ್ದೇನು ಗೊತ್ತಾ?