Select Your Language

Notifications

webdunia
webdunia
webdunia
webdunia

ತನ್ನ ಕಾಮತೃಷೆ ತೀರಿಸಿಕೊಳ್ಳಲು ಮಗಳನ್ನೇ ಬಳಸಿಕೊಳ್ಳಲು ಮುಂದಾದ ನೀಚ ತಂದೆ

ತನ್ನ ಕಾಮತೃಷೆ ತೀರಿಸಿಕೊಳ್ಳಲು ಮಗಳನ್ನೇ ಬಳಸಿಕೊಳ್ಳಲು ಮುಂದಾದ ನೀಚ ತಂದೆ
ಧಾರವಾಡ , ಶುಕ್ರವಾರ, 15 ಫೆಬ್ರವರಿ 2019 (09:26 IST)
ಧಾರವಾಡ : ಸೆಕ್ಸ್ ವಿಡಿಯೋ ತೋರಿಸಿ ತಂದೆಯೇ ತನ್ನ 17 ವರ್ಷದ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.


ಶಮಶುದ್ದಿನ ಲಾಲಮಿಯಾ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ನೀಚ ತಂದೆ. ಈತ ಮನೆಯಲ್ಲಿ ಮಗಳು ಒಬ್ಬಳೇ ಇರುವ ಸಂದರ್ಭದಲ್ಲಿ ಆಕೆಗೆ ಸೆಕ್ಸ್ ವಿಡಿಯೋ ತೋರಿಸಿ ನಂತರ ಮಗಳನ್ನು ರೂಂಗೆ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸುತ್ತಿದ್ದ. ಆ ವೇಳೆ ಪತಿಯ ನೀಚ ಕೃತ್ಯದ ಬಗ್ಗೆ ಪತ್ನಿ ಪ್ರಶ್ನಸಿದ್ದಕ್ಕೆ ಆಕೆಯನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದ.


ಹೀಗೆ ಹಲವು ಬಾರಿ ಆತ ಮಗಳ ಮೇಲೆ ಇಂತಹ ದುಷ್ಕೃತ್ಯಕ್ಕೆ ಮುಂದಾದ ಹಿನ್ನಲೆಯಲ್ಲಿ ಇದೀಗ ಪತ್ನಿ ತನ್ನ ಪತಿಯ ವಿರುದ್ಧ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಈ ಹಿನ್ನಲೆಯಲ್ಲಿ ಪೊಲೀಸರು ಪಾಪಿ ತಂದೆಯನ್ನು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮುಖೇಶ್ ಅಂಬಾನಿ ಪುತ್ರನ ಮದುವೆಯ ಆಹ್ವಾನ ಪತ್ರಿಕೆಯೇ ಇಷ್ಟೊಂದು ದುಬಾರಿ!