Publish Date: Fri, 15 Feb 2019 (09:16 IST)
Updated Date: Fri, 15 Feb 2019 (09:20 IST)
ಮುಂಬೈ: ಉದ್ಯಮಿ ಮುಖೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ಮದುವೆಯ ಆಹ್ವಾನ ಪತ್ರಿಕೆ ಇದೀಗ ಅಂತರ್ಜಾಲದಲ್ಲಿ ಗಮನಸೆಳೆಯುತ್ತಿದೆ.
ಇತ್ತೀಚೆಗೆ ಪುತ್ರಿ ಇಶಾ ಅಂಬಾನಿ ಮದುವೆಯನ್ನು ಅದ್ಧೂರಿಯಾಗಿ ಮಾಡಿದ್ದ ಅಂಬಾನಿ ಕುಟುಂಬ ಇದೀಗ ಪುತ್ರ ಆಕಾಶ್ ಮದುವೆಯನ್ನೂ ಅಷ್ಟೇ ಅದ್ಧೂರಿಯಾಗಿ ಮಾಡಿಕೊಳ್ಳುತ್ತಿದೆ. ಮಾರ್ಚ್ 10 ರಂದು ವಿವಾಹ ನಡೆಯಲಿದ್ದು, ವೈಭವದ ಆಹ್ವಾನ ಪತ್ರಿಕೆ ಹೊರತರಲಾಗಿದೆ.
ಕೃಷ್ಣ ರಾಧೆಯರ ಥೀಮ್ ನಲ್ಲಿರುವ ಅದ್ಧೂರಿ ಆಹ್ವಾನ ಪತ್ರಿಕೆಯಲ್ಲಿ ಮುಖೇಶ್ ಅಂಬಾನಿ ದಂಪತಿ ಕೈ ಬರಹದಲ್ಲಿ ಆಹ್ವಾನ ನೀಡಲಾಗಿದೆ. ಬಳಿಕ ವಿವಾಹ ಸಮಾರಂಭದ ಕಾರ್ಯಕ್ರಮಗಳ ವಿವರಗಳನ್ನು ಉಳಿದ ಪುಟಗಳಲ್ಲಿ ನೀಡಲಾಗಿದೆ. ಡಿಜಿಟಲ್ ಕಾರ್ಡ್ ಇದಾಗಿದ್ದು, ಸೋಷಿಯಲ್ ಮೀಡಿಯಾಗಳಲ್ಲೂ ವೈರಲ್ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ