ಅಂಬಾನಿ ಪುತ್ರಿಯ ಮದುವೆಗೆ ಬರುವವರಿಗಾಗಿಯೇ ಮಾಡಿರುವ ತಯಾರಿ ಕೇಳಿದರೆ ಬೆರಗಾಗುವಿರಿ!

ಭಾನುವಾರ, 9 ಡಿಸೆಂಬರ್ 2018 (08:51 IST)
ಮುಂಬೈ: ಉದ್ಯಮಿ ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಮತ್ತು ಆನಂದ್ ಪಿರಾಮಿಲ್ ವಿವಾಹ ಕಾರ್ಯಕ್ರಮದ ಪೂರ್ವಭಾವಿ ಕಾರ್ಯಕ್ರಮಗಳು ಈಗಾಗಲೇ ಆರಂಭವಾಗಿದ್ದು, ಅತಿಥಿಗಳಿಗಾಗಿಯೇ ಅಂಬಾನಿ ಕುಟುಂಬ ಮಾಡಿರುವ ತಯಾರಿ ನೋಡಿದರೆ ಬೆರಗಾಗುವುದು ಗ್ಯಾರಂಟಿ.


ಉದಯಪುರದಲ್ಲಿ ವಿವಾಹ ಪೂರ್ವ ಪಾರ್ಟಿ ಮೂರು ದಿನಗಳ ಕಾಲ ನಡೆಯುತ್ತಿದ್ದು, ಈ ಪಾರ್ಟಿಗೆ ಬಾಲಿವುಡ್, ಉದ್ಯಮ, ರಾಜಕೀಯ ಕ್ಷೇತ್ರದ ಗಣ್ಯಾತಿಗಣ್ಯರೇ ಆಗಮಿಸುತ್ತಿದ್ದಾರೆ. ವಿಐಪಿ ಅತಿಥಿಗಳಿಗಾಗಿ ಅಂಬಾನಿ ಕುಟುಂಬ ವಿಐಪಿ ಆತಿಥ್ಯವನ್ನೇ ಮಾಡಿದೆ.

ಉದಯಪುರದ ಏರ್ ಪೋರ್ಟ್ ನಲ್ಲಿ ಹೆಚ್ಚಿನ ಚಾರ್ಟೆಡ್ ಫ್ಲೈಟ್ ಗಳನ್ನು ಬುಕ್ ಮಾಡಿರುವ ಅಂಬಾನಿ, ಇಲ್ಲಿಂದ ಪಾರ್ಟಿ ನಡೆಯುವ ಸ್ಥಳಕ್ಕೆ ಅತಿಥಿಗಳನ್ನು ಕರೆದೊಯ್ಯಲು ನೂರಾರು ಲಕ್ಷುರಿ ಕಾರುಗಳನ್ನು ಏರ್ಪಾಟು ಮಾಡಿದೆ.

ಅಲ್ಲದೆ ನಗರದ ಬಹುತೇಕ ಫೈವ್ ಸ್ಟಾರ್ ಹೋಟೆಲ್ ಗಳನ್ನು ಅತಿಥಿಗಳಿಗಾಗಿ ಬುಕ್ ಮಾಡಲಾಗಿದೆ. ಇನ್ನು ಭಾರತೀಯ ಶೈಲಿಯ ಉಡುಗೆ ತೊಡುಗೆಗಳನ್ನು ಖರೀದಿಸಲು ಅತಿಥಿಗಳಿಗಾಗಿ ವಿಶೇಷ ಮಾರುಕಟ್ಟೆಯನ್ನೇ ತೆರೆಯಲಾಗಿದೆ! ಇನ್ನು, ಬರುವ ಅತಿಥಿಗಳಿಗಾಗಿ ವಿವಿಧ ಭಕ್ಷ್ಯ ಭೋಜನಗಳನ್ನು ಏರ್ಪಾಡು ಮಾಡಲಾಗಿದೆ. ಅಂತೂ ಇದು ಒಂದು ರೀತಿಯ ಉತ್ಸವದಂತೇ ಆಚರಿಸಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬಾಹುಬಲಿ ಪ್ರಭಾಸ್ ಗೂ ಇಷ್ಟವಾಗಿದೆಯಂತೆ ಕೆಜಿಎಫ್: ಯಶ್ ಇನ್ನು ನ್ಯಾಷನಲ್ ಸ್ಟಾರ್!