Select Your Language

Notifications

webdunia
webdunia
webdunia
webdunia

ಗಂಡ-ಹೆಂಡತಿ ಜಗಳಕ್ಕೆ ಮಗು ತುತ್ತಾಯ್ತು!

ವಿಹಾರ್
ನವದೆಹಲಿ , ಶುಕ್ರವಾರ, 10 ಡಿಸೆಂಬರ್ 2021 (14:59 IST)
ನವದೆಹಲಿ : ಸಮತಾ ವಿಹಾರ್ ಪ್ರದೇಶದ ನಿವಾಸಿಯಾದ ಅಮನ್, ತನ್ನ ಪತ್ನಿಯೊಂದಿಗೆ ಜಗಳವಾಡುತ್ತಿದ್ದಾಗ ಶಿಶುವಿನ ತಲೆಯನ್ನು ಗೋಡೆಗೆ ಹೊಡೆದು ಕೊಂದ್ದಿದ್ದಾನೆ.

ಈ ವಿಷಯ ತಿಳಿದ ಪೊಲೀಸ್ ತಂಡವು ಸ್ಥಳಕ್ಕೆ ತಲುಪಿದಾಗ ಮೂರು ತಿಂಗಳ ಮಗು ನೆಲದ ಮೇಲೆ ಗಾಯಗೊಂಡು ಬಿದ್ದಿರುವುದು ಕಂಡುಬಂದಿದೆ. ಆ ಸಂದರ್ಭದಲ್ಲಿ ಮಗುವಿನ ತಂದೆ ರವಿ ರೈ(26) ಮತ್ತು ಕುಡಿದ ಅಮಲಿನಲ್ಲಿದ್ದರು. ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಗುವಿನ ತಲೆಗೆ ತೀವ್ರ ಏಟಾಗಿದ್ದು, ಹೀಗಾಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ ಎಂದು ವೈದ್ಯರು ಮಾಹಿತಿ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಒಂದು ತಿಂಗಳ ಹಿಂದೆಯಷ್ಟೆ ದಂಪತಿ ಈ ಪ್ರದೇಶಕ್ಕೆ ಬಂದಿದ್ದು ಗಂಡ-ಹೆಂಡತಿ ಪ್ರತಿದಿನ ಅವರ ಆರ್ಥಿಕ ಸಮಸ್ಯೆಗಳ ಬಗ್ಗೆ ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ನೆರೆಹೊರೆಯವರು ಪೊಲೀಸರಿಗೆ ಹೇಳಿದ್ದಾರೆ.
ಜಗಳವಾಡುತ್ತಿದ್ದ ಸಂದರ್ಭದಲ್ಲಿ ಮಗು ಅದೇ ಕೋಣೆಯಲ್ಲಿತ್ತು. ನನ್ನ ಮೇಲೆ ಇದ್ದ ಕೋಪದ ಭರದಲ್ಲಿ ಮಗುವನ್ನು ಎತ್ತಿ ಗೋಡೆಗೆ ಹೊಡೆದನು ಎಂದು ಮಗುವಿನ ತಾಯಿ ಹೇಳಿದ್ದಾರೆ. ಆಕೆ ಕೊಟ್ಟ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ವ್ಯಕ್ತಿಯನ್ನು ಬಂಧಿಸಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ನೀರಿನ ಕ್ಯಾನ್ ನಲ್ಲಿ ಜೀವಂತ ಮೊಸಳೆ ಮರಿಗಳ ಅಕ್ರಮ ಮಾರಾಟ ಯತ್ನ