Publish Date: Thu, 09 Dec 2021 (11:41 IST)
Updated Date: Thu, 09 Dec 2021 (11:45 IST)
ಬೆಂಗಳೂರು : ಪತಿ ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸುವಾಗ ವಿಚಿತ್ರ ಹಾಗೂ ಕ್ರೂರವಾಗಿ ವರ್ತಿಸುತ್ತಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಕಾಡುಗೊಂಡನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
21 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಈಕೆಯ ಪತಿ ದೇವರಾಜ್ ಎಂಬಾತನ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಮೂರು ತಿಂಗಳ ಹಿಂದೆಯಷ್ಟೇ ದೇವರಾಜ್ ಜತೆಗೆ ವಿವಾಹವಾಗಿದ್ದು, ಮೊದಲ ರಾತ್ರಿಯಿಂದಲೂ ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸುವಾಗ ದೇವರಾಜ್ ವಿಚಿತ್ರ ಹಾಗೂ ಕ್ರೂರವಾಗಿ ವರ್ತಿಸುತ್ತಿದ್ದರು.
ನನಗೆ ಹಿಂಸೆಯಾಗುತ್ತಿದೆ ಎಂದು ಹೇಳಿದರೂ ಆತ ಬಿಡುತ್ತಿರಲಿಲ್ಲ. ನನಗೆ ಅನಾರೋಗ್ಯದ ಸಂದರ್ಭದಲ್ಲಿಯೂ ಲೈಂಗಿಕ ಕ್ರಿಯೆಗೆ ಬಲವಂತ ಮಾಡುತ್ತಿದ್ದರು. ಈ ರೀತಿ ವರ್ತಿಸುವುದು ಸರಿಯಲ್ಲ ಎಂದು ಹೇಳಿದರೆ, ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದರು. ನಾನು ಹೇಳಿದ ಹಾಗೆ ಕೇಳಬೇಕು ಎಂದು ಹಲ್ಲೆ ಮಾಡುತ್ತಿದ್ದರು ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.
ಈ ವಿಚಾರವನ್ನು ತವರು ಮನೆ ಹಾಗೂ ಪತಿಯ ಮನೆಯವರ ಗಮನಕ್ಕೂ ತಂದಿದ್ದೆ. ಈ ವೇಳೆ ಎರಡೂ ಕಡೆಯವರು ಪತಿ ದೇವರಾಜ್ಗೆ ಬುದ್ಧಿವಾದ ಹೇಳಿದ್ದರು. ಇನ್ನು ಮುಂದೆ ಹಾಗೆ ವರ್ತಿಸುವುದಿಲ್ಲ ಎಂದು ದೇವರಾಜ್ ಭರವಸೆ ನೀಡಿದ್ದರು. ಇದೀಗ ಮತ್ತೆ ಕೆಲ ದಿನಗಳ ಹಿಂದೆ ವಿಚಿತ್ರವಾಗಿ ಲೈಂಗಿಕ ತೊಂದರೆ ಕೊಡಲು ಆರಂಭಿಸಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಮನವಿ ಮಾಡಿದ್ದಾರೆ.