Select Your Language

Notifications

webdunia
webdunia
webdunia
webdunia

ಭ್ರಷ್ಟ ಪೊಲೀಸರು ನಾಯಿಗಳು ಎಂದ ಗೃಹ ಸಚಿವರು

Home minister
ಬೆಂಗಳೂರು , ಶನಿವಾರ, 4 ಡಿಸೆಂಬರ್ 2021 (16:18 IST)
ಭ್ರಷ್ಟ ಪೊಲೀಸರ ವಿರುದ್ಧ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಕೈ ತುಂಬ ಸಂಬಳ ನೀಡುತ್ತಿದ್ದರೂ, ಭ್ರಷ್ಟ ಪೊಲೀಸರು ನಾಯಿಗಳಂತೆ ಎಂಜಲು ಕಾಸು ತಿಂದು ಬದುಕುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಪೊಲೀಸರ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಆಕ್ಷೇಪಾರ್ಹ ಪದಗಳ‌ ಬಳಕೆ ವಿಚಾರ ಮಾಡಿದ್ದ ಹಿನ್ನಲೆಯಲ್ಲಿ,
 
ಸಿಎಂ ಅವರು ಗೃಹ ಸಚಿವರ ಪರವಾಗಿ ಬ್ಯಾಟಿಂಗ್​ ಮಾಡಿದ್ದಾರೆ.ಗೃಹ ಸಚಿವರಿಗೆ ಪೊಲೀಸರ ಬಗ್ಗೆ ಬಹಳಷ್ಟು ಕಾಳಜಿ ಇದ್ದು ,ಎಲ್ಲ ಪೊಲೀಸರಿಗೂ ಆ ಮಾತುಗಳನ್ನು ಹೇಳಿಲ್ಲ , ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ ಕೆಲವು ಪೊಲೀಸರಿಗೆ ಹಾಗೆ ಮಾತಾಡಿರೋದಾಗಿ ಅಂದಿದ್ದಾರೆ. ಗೃಹ ಸಚಿವರ ಜತೆ ಇದರ ಬಗ್ಗೆ ಮಾತಾಡಿದ್ದೀನಿ , ಅವರು ಈ ಬಗ್ಗೆ ಸ್ಪಷ್ಟೀಕರಣ ಕೊಟ್ಟಿದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮನೆ ಮನೆಗೆ ಲಸಿಕೆ ಅಭಿಯಾನ