Select Your Language

Notifications

webdunia
webdunia
webdunia
webdunia

ಒಮೈಕ್ರೋನ್ ರೋಗಿ ನಾಪತ್ತೆ..!!

ಒಮೈಕ್ರೋನ್ ರೋಗಿ ನಾಪತ್ತೆ..!!
ಬೆಂಗಳೂರು , ಶನಿವಾರ, 4 ಡಿಸೆಂಬರ್ 2021 (15:02 IST)
ಓಮಿಕ್ರಾನ್ ರೂಪಾಂತರಿ ತಗುಲಿರುವ ಮೊದಲ ರೋಗಿಯು ರಾಜ್ಯದಿಂದ ಪರಾರಿಯಾಗಿದ್ದಾನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಹೇಳಿದೆ.
 
ಖಾಸಗಿ ಲ್ಯಾಬ್‌ನವರು ಕೊರೊನಾ ನೆಗೆಟಿವ್​​ ವರದಿಯನ್ನು ನೀಡಿದ್ದಾರೆ ಎಂದು ರಾಜ್ಯ ಸರ್ಕಾರ ಹೇಳಿದೆ.
. ದಕ್ಷಿಣ ಆಫ್ರಿಕಾದಿಂದ ನೆಗೆಟಿವ್​​ ವರದಿಯೊಂದಿಗೆ 20/11/2021 ರಂದು ಪ್ರಯಾಣಿಸಿದ್ದಾರೆ ಮತ್ತು ಅವರನ್ನು KIA ಬೆಂಗಳೂರಿನಲ್ಲಿ ಪರೀಕ್ಷಿಸಲಾಯಿತು.
2. ಅವರು ಆಗಮಿಸಿದ ನಂತರ 20/11/2021 ರಂದು ಹೋಟೆಲ್​ನಲ್ಲಿ ಇರಿಸಲಾಗಿದ್ದು, ಪರೀಕ್ಷಾ ವರದಿಯಲ್ಲಿ ಪಾಸಿಟಿವ್​ ಬಂದಿದೆ.
3. ಯುಪಿಐ-ಐಸಿ ವೈದ್ಯರು ಅವರಿಗೆ ಚಿಕಿತ್ಸೆ ನೀಡಲು ಹೋಟೆಲ್‌ಗೆ ಭೇಟಿ ನೀಡಿದ್ದಾರೆ. ಆದರೆ ಅಲ್ಲಿ ಅವರಿಗೆ ರೋಗದ ಯಾವುದೇ ಲಕ್ಷಣಗಳಿರಲಿಲ್ಲ. ಹಾಗಾಗಿ ಸ್ವಯಂ -ಐಸೋಲೇಟ್​ ಆಗಲು ಸೂಚಿಸಿದ್ದಾರೆ.
4. 22/11/2021 ರಂದು, ಅವರ ಪರೀಕ್ಷಾ ಮಾದರಿಗಳನ್ನು ಸಂಗ್ರಹಿಸಿ BBMP ಮೂಲಕ ಜೀನೋಮಿಕ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿದೆ.
5. ರೋಗಿಯು 23/11/2021 ರಂದು ಖಾಸಗಿ ಲ್ಯಾಬ್‌ನಲ್ಲಿ ಅವರು ಸ್ವಯಂ ಪರೀಕ್ಷೆ ಮಾಡಿಸಿದಾಗ ನೆಗೆಟಿವ್​ ಎಂದು ಬಂದಿದೆ.
6. 24 ಜನ ಈ ವ್ಯಕ್ತಿಯೊಂದಿಗೆ ನೇರ ಸಂಪರ್ಕ ಹೊಂದಿದ್ದು, ಎಲ್ಲರೂ ಲಕ್ಷಣರಹಿತರಾಗಿದ್ದಾರೆ. ಎಲ್ಲಾರ ವರದಿ ನೆಗೆಟಿವ್​ ಬಂದಿದೆ.
7. 22 ಮತ್ತು 23 ರಂದು, UPHC ತಂಡವು 240 ದ್ವಿತೀಯ ಸಂಪರ್ಕಿತರ ಮಾದರಿಗಳನ್ನು ಸಂಗ್ರಹಿಸಿದೆ ಮತ್ತು ಎಲ್ಲಾರ ಪರೀಕ್ಷಾ ವರದಿ ನೆಗೆಟಿವ್​ ಬಂದಿದೆ.
8. ಮೇಲಿನ ವ್ಯಕ್ತಿ ನವೆಂಬರ್ 27 ರ ಮಧ್ಯರಾತ್ರಿ ಚೆಕ್ ಔಟ್ ಮಾಡಿ ವಿಮಾನ ನಿಲ್ದಾಣಕ್ಕೆ ಕ್ಯಾಬ್ ತೆಗೆದುಹೋಗಿದ್ದಾರೆ. ನಂತರ ದುಬೈಗೆ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿರಿಯ ನಟ ಶಿವರಾಮ್ ಇನ್ನಿಲ್ಲ..!!!