Publish Date: Fri, 03 Dec 2021 (11:35 IST)
Updated Date: Fri, 03 Dec 2021 (11:37 IST)
ಬೆಂಗಳೂರು : ಓಮಿಕ್ರೋನ್ ವೈರಸ್ ಸೋಂಕಿತ ವೈದ್ಯನ ಪತ್ನಿಗೂ ಸೋಂಕು ದೃಢಪಟ್ಟಿರುವ ಶಂಕೆ ವ್ಯಕ್ತವಾಗುತ್ತಿದೆ.
ಬೆಂಗಳೂರಿನಲ್ಲಿ ಗುರುವಾರ ಇಬ್ಬರು ವ್ಯಕ್ತಿಗಳಲ್ಲಿ ಓಮಿಕ್ರಾನ್ ಸೋಂಕು ದೃಢಪಟ್ಟಿತ್ತು. ಅದರಲ್ಲಿ ಸೊಂಕಿತ ವೈದ್ಯರೊಬ್ಬರ ಪತ್ನಿಗೂ ಇದೀಗ ಓಮಿಕ್ರೋನ್ ವೈರಸ್ ತಗುಲಿರುವ ಅನುಮಾನ ವ್ಯಕ್ತವಾಗುತ್ತಿದೆ.
ಸದ್ಯ ಈ ಸಂಬಂಧ ಆರೋಗ್ಯ ಇಲಾಖೆ ಇಂದು ಸಂಜೆ ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ. ಓಮಿಕ್ರಾನ್ ಸೊಂಕಿತನ ಪತ್ನಿ ಕೂಡ ಕಣ್ಣಿನ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದು, ವೈದ್ಯೆಯ ಸಂಪರ್ಕಕ್ಕೆ ಬಂದಿದ್ದ 30 ಜನ ಪ್ರಾಥಮಿಕ, 90 ದ್ವಿತೀಯ ಸಂಪರ್ಕ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.
ವೈದ್ಯೆಗೆ 41 ವರ್ಷವಾಗಿದ್ದು, ಮೊದಲು ಅವರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಆ ನಂತರ ಜಿನೊಮ್ ಸೀಕ್ವೆನ್ಸ್ ನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಜಿನೊಮ್ ಸೀಕ್ವೆನ್ಸ್ ವರದಿಯಲ್ಲಿ ವೈದ್ಯೆಗೆ ಓಮಿಕ್ರಾನ್ ಸೋಂಕು ಧೃಡಪಟ್ಟಿದೆ ಎನ್ನಲಾಗುತ್ತಿದೆ.