Select Your Language

Notifications

webdunia
webdunia
webdunia
webdunia

ಓಮಿಕ್ರಾನ್ ಸೋಂಕಿತರ ನಾಲ್ವರಿಗೆ ಕೊರೊನಾ ಪಾಸಿಟಿವ್ : ಸುಧಾಕರ್

ಓಮಿಕ್ರಾನ್ ಸೋಂಕಿತರ ನಾಲ್ವರಿಗೆ ಕೊರೊನಾ ಪಾಸಿಟಿವ್ : ಸುಧಾಕರ್
ಬೆಂಗಳೂರು , ಶುಕ್ರವಾರ, 3 ಡಿಸೆಂಬರ್ 2021 (11:23 IST)
ಬೆಂಗಳೂರು : ದಕ್ಷಿಣ ಆಫ್ರಿಕಾ ಮೂಲದ ಒಬ್ಬರಿಗೆ ಮತ್ತು ಬೆಂಗಳೂರಿನ ವೈದ್ಯರೊಬ್ಬರಿಗೆ ಓಮಿಕ್ರಾನ್
ಸೋಂಕು ಕಾಣಿಸಿಕೊಂಡಿದ್ದು ಅವರೊಂದಿಗೆ ಪ್ರಾಥಮಿಕ ಸಂಪರ್ಕಹೊಂದಿದ್ದ ಇತರ 4 ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಫ್ರಿಕಾ ಮೂಲದಿಂದ ಬಂದವರಿಗೆ ಪ್ರಯಾಣದ ಹಿನ್ನೆಲೆ ಇದ್ದು, ಅವರಲ್ಲಿ ಓಮಿಕ್ರಾನ್ ಪತ್ತೆಯಾಗಿದೆ. ಆದರೆ ಬೆಂಗಳೂರಿನ ವೈದ್ಯರಿಗೆ ಪ್ರಯಾಣ ಹಿನ್ನೆಲೆ ಇಲ್ಲ. ಆದರೂ ಪಾಸಿಟಿವ್ ಬಂದಿದೆ.
ಈಗಾಗಲೇ ಇಬ್ಬರು ಓಮಿಕ್ರಾನ್ ಸೋಂಕಿತರು ಮತ್ತು ಅವರ ಸಂಪರ್ಕದಲ್ಲಿದ್ದ 4 ಜನರಿಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ ಅವರೆಲ್ಲರೂ ಕೂಡ ಐಸೋಲೇಟ್ ಆಗಿದ್ದು, ಸೂಕ್ತ ಚಿಕಿತ್ಸೆ ಕೊಡಲಾಗುತ್ತಿದೆ. ಯಾವುದೇ ಸಮಸ್ಯೆ ಇಲ್ಲ. ರೋಗದ ಲಕ್ಷಣಗಳು ಅತಿಯಾಗಿ ಕಾಣಿಸಿಕೊಂಡಿಲ್ಲ ಎಂದು ಮಾಹಿತಿ ನೀಡಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ನರ್ಸಿಂಗ್ ಕಾಲೇಜಿನ 23 ವಿದ್ಯಾರ್ಥಿಗಳಿಗೆ ಸೋಂಕು!