Select Your Language

Notifications

webdunia
webdunia
webdunia
webdunia

ಮನೆ ಮನೆಗೆ ಲಸಿಕೆ ಅಭಿಯಾನ

ಮನೆ ಮನೆಗೆ ಲಸಿಕೆ ಅಭಿಯಾನ
ಬೆಂಗಳೂರು , ಶನಿವಾರ, 4 ಡಿಸೆಂಬರ್ 2021 (16:10 IST)
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಹೊರಗೆ, ಅರೆ ನಗರ ಪ್ರದೇಶಗಳು ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಎರಡನೇ ಡೋಸ್ ಕೋವಿಡ್ ಲಸಿಕೆಯನ್ನು ಪೂರ್ಣಗೊಳಿಸಲು ಜಿಲ್ಲಾಡಳಿತ ಮಂಡಳಿಯು ಅಧಿಕಾರಿಗಳಿಗೆ 10 ದಿನಗಳ ಗುರಿಯನ್ನು ನಿಗದಿಪಡಿಸಿದೆ.ಗುರಿ ಸಾಧಿಸಲು, ಜಲಮಂಡಳಿ ಇಲಾಖೆ ನೌಕರರನ್ನು ಇತರೆ ಮುಂಚೂಣಿ ಕಾರ್ಯಕರ್ತರೊಂದಿಗೆ ಒಗ್ಗೂಡಿಸಲಾಗಿದ್ದು, 'ಹರ್ ಘರ್ ದಸ್ತಕ್' ಅಭಿಯಾನವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
 
ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರು ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಅರ್ಹ ಜನಸಂಖ್ಯೆಯ ಶೇ.85ರಷ್ಟು ಜನರು ಎರಡನೇ ಡೋಸ್ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ. ಇದೀಗ ಲಸಿಕೆ ಅಭಿಯಾನವನ್ನು ಮತ್ತಷ್ಟು ತೀವ್ರಗೊಳಿಸಲಾಗುತ್ತಿದೆ. ಓಮಿಕ್ರಾನ್ ಸೋಂಕು ಪತ್ತೆಯಾಗಿದೆ ಎಂದಷ್ಟೇ ಲಸಿಕೆ ತೀವ್ರಗೊಳಿಸಲಾಗಿಲ್ಲ. ಆದರೆ, ಕ್ಲಸ್ಟರ್ ಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾದ ಹಿನ್ನೆಲೆಯಲ್ಲಿ ತೀವ್ರಗೊಳಿಸಲಾಗಿದೆ ಎಂದು ಹೇಳಿದ್ದಾರೆ.
 
ಲಸಿಕೆಯ ಜೊತೆಗೆ ಆರೋಗ್ಯ ಸಮೀಕ್ಷೆಯನ್ನೂ ತೀವ್ರಗೊಳಿಸಲಾಗಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ರೋಗನಿರೋಧಕ ವಿವರಗಳನ್ನು ಪರಿಶೀಲಿಸಲಾಗುತ್ತಿದೆ, ಎಲ್ಲಾ ಹಿರಿಯ ನಾಗರಿಕರು ಮತ್ತು ರೋಗಲಕ್ಷಣಗಳನ್ನು ಹೊಂದಿರುವ ಜನರ ಆರೋಗ್ಯವನ್ನು ಕೂಡ ಪರಿಶೀಲಿಸಲಾಗುತ್ತಿದ್ದು, ಅವರ ಮೇಲೆ ನಿಗಾ ಇರಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸುಮಾರು 900 ಗ್ರಾಮಗಳಿದ್ದು, ಅಲ್ಲಿ ವಿವರವಾದ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಒಮೈಕ್ರೋನ್ ರೋಗಿ ನಾಪತ್ತೆ..!!