Select Your Language

Notifications

webdunia
webdunia
webdunia
webdunia

ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜತೆ ಗುರುತಿಸಿಕೊಂಡಿದ್ದ ಕೈ ಕಾರ್ಯಕರ್ತೆಯ ಶವ ಸೂಟ್‌ಕೇಸ್‌ನಲ್ಲಿ ಪತ್ತೆ

ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜತೆ ಗುರುತಿಸಿಕೊಂಡಿದ್ದ ಕೈ ಕಾರ್ಯಕರ್ತೆಯ ಶವ ಸೂಟ್‌ಕೇಸ್‌ನಲ್ಲಿ ಪತ್ತೆ

Sampriya

ದೆಹಲಿ , ಭಾನುವಾರ, 2 ಮಾರ್ಚ್ 2025 (10:03 IST)
Photo Courtesy X
ದೆಹಲಿ: ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿ ಜತೆ ಕಾಣಿಸಿಕೊಂಡಿದ್ದ 22 ವರ್ಷದ ಕಾಂಗ್ರೆಸ್ ಕಾರ್ಯಕರ್ತೆ  ಹಿಮಾನಿ ನರ್ವಾಲ್ ಅವರ ಮೃತದೇಹ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿದೆ. ಶುಕ್ರವಾರ ಸಂಪ್ಲಾ ಬಸ್ ನಿಲ್ದಾಣದ ಬಳಿ ನೀಲಿ ಬಣ್ಣದ ದೊಡ್ಡ ಸೂಟ್‌ಕೇಸ್‌ನಲ್ಲಿ ಹಿಮಾಣಿ ಮೃತದೇಹ ಪತ್ತೆಯಾಗಿದ್ದು, ಈ ಕುರಿತು ಸಂಪ್ಲಾ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿತ್ತು.

ಈ ಬಗ್ಗೆ ಮಾಜಿ ಸಿಎಂ ಮಾಜಿ ಭೂಪಿಂದರ್ ಸಿಂಗ್ ಹೂಡಾ ಅವರು ಪ್ರತಿಕ್ರಿಯಿಸಿ, ಮಹಿಳೆಯರ ವಿರುದ್ಧ ಯಾವುದೇ ರೀತಿಯ ಘಟನೆ ನಡೆದರೆ, ಸರ್ಕಾರ ಮತ್ತು ಇಡೀ ಕಾನೂನು ಸುವ್ಯವಸ್ಥೆ ಅನುಕರಣೀಯ ಕ್ರಮ ತೆಗೆದುಕೊಳ್ಳಬೇಕು, ಭವಿಷ್ಯದಲ್ಲಿ ಅಪರಾಧ ಪ್ರವೃತ್ತಿಯುಳ್ಳ ಯಾರಾದರೂ ಇಂತಹ ಕೃತ್ಯ ಮಾಡುವ ಮೊದಲು ಸಾವಿರ ಬಾರಿ ಯೋಚಿಸುತ್ತಾರೆ ಎಂದು ಹೂಡಾ ಹೇಳಿದರು.

ಮಹಿಳೆಯರ ವಿರುದ್ಧ ಯಾವುದೇ ರೀತಿಯ ಘಟನೆ ನಡೆದರೆ, ಸರ್ಕಾರ ಮತ್ತು ಇಡೀ ಕಾನೂನು ಸುವ್ಯವಸ್ಥೆ ಅನುಕರಣೀಯ ಕ್ರಮವನ್ನು ತೆಗೆದುಕೊಳ್ಳಬೇಕು, ಭವಿಷ್ಯದಲ್ಲಿ ಯಾವನೂ ಈ ರೀತಿಯ ಕೃತ್ಯ ಎಸಗುವ ಯೋಚನೆಗೂ ಮುನ್ನಾ, ಸಾವಿರ ಬಾರಿ ಯೋಚನ ಮಾಡಬೇಕೆಂದು ಖಾರವಾಗಿ ಪ್ರತಿಕ್ರಿಯಿಸಿದರು.ಸ

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂಬುದನ್ನು ಈ ದುರಂತ ಘಟನೆ ಮತ್ತೊಮ್ಮೆ ಬಹಿರಂಗಪಡಿಸಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ರೋಹ್ಟಕ್‌ನಲ್ಲಿ ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಅವರ ಬರ್ಬರ ಹತ್ಯೆಯ ಸುದ್ದಿ ಅತ್ಯಂತ ದುಃಖಕರ ಮತ್ತು ಆಘಾತಕಾರಿಯಾಗಿದೆ. ಅಗಲಿದ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಮತ್ತು ಕುಟುಂಬದ ಸದಸ್ಯರಿಗೆ ನನ್ನ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಬಾಲಕಿಯೊಬ್ಬಳನ್ನು ಈ ರೀತಿ ಕೊಲೆ ಮಾಡಿ ಸೂಟ್‌ಕೇಸ್‌ನಲ್ಲಿ ಶವ ಪತ್ತೆಯಾಗಿರುವುದು ಅತ್ಯಂತ ದುಃಖಕರ ಮತ್ತು ಆಘಾತಕಾರಿಯಾಗಿದೆ. ಇದು ಸ್ವತಃ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಕಳಂಕವಾಗಿದೆ ಎಂದು ಹೂಡಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಚ್ಚೇ ದಿನ್ ಬಂದಿರುವುದು ಮೋದಿಯ ಶ್ರೀಮಂತ ಗೆಳೆಯರಿಗೆ ಮಾತ್ರ: ಸಿಎಂ ವಾಗ್ದಾಳಿ