ನವದೆಹಲಿ: ನಿನ್ನೆ ದೆಹಲಿಯಲ್ಲಿ ಸಭೆ ನಡೆಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇನ್ನು ಮುಂದೆ ಚುನಾವಣೆ ಸೋತರೆ ನೀವೇ ಕಾರಣ ಎಂದು ಎಚ್ಚರಿಕೆ ನೀಡಿದ್ದರು. ಇದರ ಬಗ್ಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ಹಲವು ಕಾಮೆಂಟ್ ಗಳು ಬರುತ್ತಿವೆ.
ಚುನಾವಣೆಗಳಲ್ಲಿ ಗೆದ್ದರೆ ರಾಹುಲ್ ಗಾಂಧಿ ಕಾರಣ, ಸೋತರೆ ಸಾಮಾನ್ಯ ನಾಯಕರು ಕಾರಣನಾ ಎಂದು ನೆಟ್ಟಿಗರು ಟಾಂಗ್ ಕೊಟ್ಟಿದ್ದಾರೆ. ಸತತ ಸೋಲಿನಿಂದ ಕಂಗೆಟ್ಟ ಕಾಂಗ್ರೆಸ್ ನಾಯಕ ಖರ್ಗೆ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಬೆಳೆಸಲು ಕೆಲಸ ಮಾಡಬೇಕು. ಮುಂದೆ ಇದೇ ರೀತಿ ಚುನಾವಣೆಗಳಲ್ಲಿ ಸೋಲು ಕಾಣುವ ಪರಿಸ್ಥಿತಿ ಎದುರಾಗಬಾರದು. ಸೋತರೆ ನೀವೇ ಹೊಣೆ ಎಂದು ಖರ್ಗೆ ಎಚ್ಚರಿಕೆ ನೀಡಿದ್ದರು.
ಇದರ ಬಗ್ಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗಿದೆ. ಯಾವುದಾದರೂ ಚುನಾವಣೆ ಗೆದ್ದಾಗ ರಾಹುಲ್ ಪಾದ ಯಾತ್ರೆ ಕಾರಣ, ರಾಹುಲ್ ಗಾಂಧಿ ಸಂವಿಧಾನದ ಬಗ್ಗೆ ಹೋರಾಟಕ್ಕೆ ಸಂದ ಜಯ ಎನ್ನುವ ಕಾಂಗ್ರೆಸ್ ನಾಯಕರು ಈಗ ಸೋತಾಗ ಸ್ಥಳೀಯ ನಾಯಕರನ್ನು ಹೊಣೆ ಮಾಡುವುದು ಯಾಕೆ ಎಂದು ಹಲವರು ಕಾಮೆಂಟ್ ಮಾಡುತ್ತಿದ್ದಾರೆ.