Select Your Language

Notifications

webdunia
webdunia
webdunia
webdunia

ಸಹೋದ್ಯೋಗಿಗಳೊಂದಿಗೆ ಗುರುಗ್ರಾಮಕ್ಕೆ ತೆರಳಿದ್ದ ಟೆಕ್ಕಿ ಶವವಾಗಿ ಪತ್ತೆ

Chandigadha Techie Death case
ಚಂಡೀಗಢ: ಹರಿಯಾಣದ ಗುರುಗ್ರಾಮದ ಹೋಟೆಲ್ ಒಂದರ ಬಾತ್‌ರೂಮ್‌ನಲ್ಲಿ ಬೆಂಗಳೂರು  ಮೂಲದ ಟೆಕ್ಕಿಯೊಬ್ಬರ ಶವ ಪತ್ತೆಯಾದ ಘಟನೆ ನಡೆದಿದೆ.

ಮೃತ ಟೆಕ್ಕಿಯನ್ನು ವಿಜಯ್ ವಿಜಯ್ ಸರೂಪ್ (38) ಎಂದು ಗುರುತಿಸಲಾಗಿದೆ. ಅವರು ತಮ್ಮ 9ಮಂದಿ ಸಹೋದ್ಯೋಗಿಗಳೊಂದಿಗೆ 3ದಿನಗಳ ಹಿಂದೆ ಗುರುಗ್ರಾಮಕ್ಕೆ ಬಂದಿದ್ದರು. ಅವರೆಲ್ಲರು ಸೆಕ್ಟರ್ 29ರಲ್ಲಿರುವ ಕ್ರೌನ್ ಪ್ಲಾಜಾ ಹೋಟೆಲ್‌ನಲ್ಲಿ ತಂಗಿದ್ದರು.

ಮಂಗಳವಾರ ಎಲ್ಲಾ ಉದ್ಯೋಗಿಗಳಿಗೆ ಪ್ರತ್ಯೇಕ ಕೊಠಡಿಗಳನ್ನು ಕಾಯ್ದಿರಿಸಲಾಗಿತ್ತು. ಕೆಲವರು ಬುಧವಾರ ಅಲ್ಲಿಂದ ಹೊರಟುಹೋಗಿದ್ದರು. ಇನ್ನೂ ಪೊಲೀಸರು ಈ ಬಗ್ಗೆ ಮಾಹಿತಿ ನೀಡಿ ಸರೂಪ್ ಸೇರಿದಂತೆ ಇತರರು ಹೋಟೆಲ್‌ನಲ್ಲಿಯೇ ಉಳಿದುಕೊಂಡಿದ್ದರು.

ಸರೂಪ್ ಗುರುವಾರ ಮಧ್ಯಾಹ್ನ ಹೊರಗೆ ಹೋಗಬೇಕಿತ್ತು. ಆದರೆ ಆತನ ರೂಂ ಬಳಿ ಹೋದು ಕರೆದಾಗ ಪ್ರತಿಕ್ರಿಯೆ ಬಾರದೇ ಇದ್ದಾಗ ಹೋಟೆಲ್‌ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. 

ಪೊಲೀಸರು ಪರಿಶೀಲಿಸಿದಾಗ ಅವರ ಶವ ಬಾತ್‌ರೂಮ್ ಕಮೋಡ್‌ ಬಳಿ ಬಿದ್ದಿರುವುದು ಗೊತ್ತಾಗಿತ್ತು. ಪೊಲೀಸರು ಹೃದಯಾಘಾತದಿಂದ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಶಂಕಿಸಿದ್ದಾರೆ.

ಘಟನಾ ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದ್ದು, ಸರೂಪ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆಯಲ್ಲಿ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ತ್ರಿವಳಿ ಮರ್ಡರ್ ಕೇಸ್‌: ಮಿಸ್ಸಿಂಗ್ ಕೇಸ್ ಕೊಡಲು ಹೋಗಿ ಲಾಕ್ ಆದ ಪಾಪಿ