ಬೆಂಗಳೂರು: ವಿಜಯನಗರವನ್ನೇ ಬೆಚ್ಚಿಬೀಳಿಸಿದ ತ್ರಿವಳಿ ಮರ್ಡರ್ ಪ್ರಕರಣ ಸಂಬಂಧ ಇದೀಗ ಬಿಗ್‌ಟ್ವಿಸ್ಟ್ ಸಿಕ್ಕಿದ್ದು, ಮಿಸ್ಸಿಂಗ್ ಕೇಸ್ ದಾಖಲು ಮಾಡಲು ಹೋಗಿ ಪಾಪಿ ಮಗ ಲಾಕ್ ಆಗಿದ್ದಾನೆ.
ಬೆಂಗಳೂರಿನ ತಿಲಕನಗರ ಪೊಲೀಸ್ ಠಾಣೆಗೆ ತನ್ನ ಪೋಷಕರು ನಾಪತ್ತೆಯಾಗಿದ್ದಾರೆಂದು ದೂರನ್ನು ಕೊಡಲು ಹೋಗಿ ಪೊಲೀಸರ ಬಳಿ ಲಾಕ್ ಆಗಿದ್ದಾನೆ. ದೂರಿನಲ್ಲಿ ಆತ ಬೆಂಗಳೂರಿಗೆ ಪೋಷಕರಿಗೆ ಚಿಕಿತ್ಸೆ ನೀಡಲು ಕರೆ ತರುತ್ತಿದ್ದ ಪಾಪಿ ಮಗ ಅಕ್ಷಯ್‌ಗೆ ಮನೆಯಲ್ಲಿ ತನ್ನ ಪೋಷಕರು ಹಾಗೂ ಸಹೋದರಿಯನ್ನು ಕೊಂದಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ಇನ್ನೂ ಕೊಲೆಗೆ ಕಾರಣ ಏನೆಂಬುದನ್ನು ಇನ್ನೂ ತಿಳಿದುಬರಬೇಕಿದೆ.
ಕೊಟ್ಟೂರು ಪಟ್ಟಣದಲ್ಲಿ ತಂದೆ, ತಾಯಿ ಹಾಗೂ ಸಹೋದರಿಯನ್ನು ಕೊಂದು ಅಕ್ಷಯ್ ಪರಾರಿಯಾಗಿದ್ದಾನೆ. ನಂತರ ಆತ ಬೆಂಗಳೂರಿನ ತಿಲಕ ನಗರ ಪೊಲೀಸ್ ಠಾಣೆಯಲ್ಲಿ ಪೋಷಕರು ನಾಪತ್ತೆಯಾಗಿದ್ದಾರೆಂದು ದೂರನ್ನು ನೀಡಿದ್ದಾನೆ. 27 ರಂದು ಕೊಲೆ ಮಾಡಿ ಬೆಂಗಳೂರಿಗೆ ಪರಾರಿಯಾಗಿದ್ದಾನೆ. ಇನ್ನೂ ಕೊಲೆ ಸಂಬಂಧ ಈತನೇ ಪೊಲೀಸ್ ಠಾಣೆಗೆ ತೆರಳಿ ದೂರನ್ನು ನೀಡಿದ್ದಾನೆ. ಇದೀಗ ಪಾಪಿ ಮಗ ಖಾಕಿ ಕೈಯಲ್ಲಿ ಲಾಕ್ ಆಗಿದ್ದಾನೆ.