ಬೆಂಗಳೂರು: ಪತ್ನಿಯ ಕಿರುಕುಳಕ್ಕೆ ಮದುವೆಯಾದ 8 ತಿಂಗಳಿಗೆ ಬ್ಯಾಂಕ್ ಉದ್ಯೋಗಿ ಪತಿ ಆತ್ಮಹತ್ಯೆ ಶರಣಾಗಿ ಜೀವನ ಅಂತ್ಯಗೊಳಿಸಿದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಆತ್ಮಹತ್ಯೆಗೆ ಶರಣಾದ ಪತಿಯನ್ನು ಗಗನ್ ರಾವ್ ಎಂದು ಗುರುತಿಸಲಾಗಿದೆ.
ಇವರು 8 ತಿಂಗಳ ಹಿಂದೆಯಷ್ಟೇ ಮೇಘನಾ ಜಾವ್ ಅವರನ್ನು ಮದುವೆಯಾಗಿದ್ದರು. ಬ್ಯಾಂಕ್ ಉದ್ಯೋಗಿಯಾಗಿದ್ದ ಗಗನ್ ಪತ್ನಿ ವಿರುದ್ಧ ಕಿರುಕುಳ ಆರೋಪ ಮಾಡಿ ನೇಣಿಗೆ ಶರಣಾಗಿದ್ದಾರೆ. ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪತಿ ಪತ್ನಿ ಮಧ್ಯೆ ಜಗಳ: ಗಗನ್ ಮೇಲೆ ಪತಿ ಮೇಘನಾ ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಳಂತೆ. ಇದೇ ವಿಚಾರಕ್ಕೆ ಮನೆಯಲ್ಲಿ ಹಲವು ಬಾರಿ ಗಲಾಟೆಯಾಗಿ, ತವರು ಮನೆಗೆ ಹೋಗಿದ್ದರು. ಈಚೆಗೆ ಗಂಡನ ಮನೆಗೆ ವಾಪಾಸ್ಸಾಗಿದ್ದ ಮೇಘನಾ ನಿನ್ನೆ ರಾತ್ರಿ ಮತ್ತೆ ಗಲಾಟೆ ನಡೆದಿದೆ. ಇದರಿಂದ ಬೇಸತ್ತ ಗಗನ್ ನೇಣಿಗೆ ಶರಣಾಗಿದ್ದಾರೆ.
ಸದ್ಯ ಮೃತ ಗಗನ್ ಕುಟುಂಬಸ್ಥರು, ಮೇಘನಾ ವಿರುದ್ಧ ಮಾಟ ಮಂತ್ರ ಮಾಡಿ ಕಿರುಕುಳ ನೀಡಿರುವ ಆರೋಪ ಮಾಡುತ್ತಿದ್ದಾರೆ.