ಬೆಂಗಳೂರು: ಏಳು ವರ್ಷದ ಬಾಲಕಿಯನ್ನು ಆಕೆಯ ಮಲತಂದೆಯೇ ಮನೆಯಲ್ಲೇ ಕೊಚ್ಚಿ ಕೊಲೆಗೈದಿರುವ ಘಟನೆ ಶುಕ್ರವಾರ ಕುಂಬಳಗೋಡಿನಲ್ಲಿ ನಡೆದಿದೆ. ಆರೋಪಿಯನ್ನು ದರ್ಶನ್ (30) ಎಂದು ಗುರುತಿಸಲಾಗಿದ್ದು, ಮಾರುಕಟ್ಟೆಯೊಂದರಲ್ಲಿ ಉದ್ಯೋಗಿಯಾಗಿದ್ದು, ಸದ್ಯ ತಲೆಮರೆಸಿಕೊಂಡಿದ್ದಾನೆ.
									
			
			 
 			
 
 			
					
			        							
								
																	ಕೊಲೆಯಾದ ಬಾಲಕಿಯನ್ನು ಸಿರಿ ಎಂದು ಗುರುತಿಸಲಾಗಿದ್ದು, ಈಕೆಯ ತಾಯಿ ಸಿರಿ ಅವರು ಪತಿಯಿಂದ ಬೇರ್ಪಟ್ಟು ಕನ್ನಿಕಾ ಲೇಔಟ್‌ನಲ್ಲಿ ನೆಲೆಸಿದ್ದರು.
									
										
								
																	ಪೊಲೀಸರ ಪ್ರಕಾರ, ಮಗು ಮನೆಯಲ್ಲಿ ಸೌಜನ್ಯದಿಂದ ವರ್ತಿಸದಿದ್ದಾಕ್ಕಾಗಿ ದರ್ಶನ್ ಆಗಾಗ ಮಗುವನ್ನು ಶಿಕ್ಷಿಸುತ್ತಿದ್ದನ್ನು. 
									
											
									
			        							
								
																	ಆಕೆಯ ವರ್ತನೆಯಿಂದ ಮನನೊಂದ ಆತ ಆಕೆಯ ಮೇಲೆ ಹಲ್ಲೆ ನಡೆಸಿ ಕೊಚ್ಚಿ ಕೊಲೆ ಮಾಡಿದ್ದ. ಘಟನೆ ನಡೆದಾಗ ಹೊರಾಂಗಣ ವಿನ್ಯಾಸ ಕಂಪನಿ ಕೆಲಸಕ್ಕೆಂದು ಹೊರಗಡೆ ಹೋಗಿದ್ದಾಗ ಈ ಕೃತ್ಯ ನಡೆದಿದೆ. 
									
			                     
							
							
			        							
								
																	ಸಂಜೆ 5.30ರ ಸುಮಾರಿಗೆ ಆಕೆ ಮನೆಗೆ ವಾಪಾಸ್ಸಾಗಿದ್ದು, ಈ ವೇಳೆ ಮಗಳು ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು. ಮಗಳು ಚಲನರಹಿತವಾಗಿ ಬಿದ್ದಿರುವುದನ್ನು ಕಂಡು ಕಿರುಚಾಡಿದ್ದಾಳೆ. 
									
			                     
							
							
			        							
								
																	ಸಾಮಾಜಿಕ ಜಾಲತಾಣದ ಮೂಲಕ ಆರೋಪಿ ದರ್ಶನ್, ಪರಿಚಯವಾಗಿದ್ದಾನೆ. ಈಚೆಗಷ್ಟೇ ಇವರಿಬ್ಬರು ವಿವಾಹವಾಗಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. 
									
			                     
							
							
			        							
								
																	ತುಮಕೂರಿನ ಸ್ವಗ್ರಾಮಕ್ಕೆ ಪರಾರಿಯಾಗಿದ್ದಾನೆ ಎನ್ನಲಾದ ದರ್ಶನ್‌ನನ್ನು ಹಿಡಿಯುವ ಪ್ರಯತ್ನ ನಡೆಯುತ್ತಿದೆ.