ಬೆಂಗಳೂರು: ಪ್ರಿಯತಮೆಯನ್ನು ಪ್ರಿಯಕರನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಶ್ರೀರಾಮಪುರ ರೈಲ್ವೇ ಟ್ರಾಕ್ಸ್ ಬಳಿ ನಡೆದಿದೆ. ಕೊಲೆಯಾದ ಕಾಲೇಜು ವಿದ್ಯಾರ್ಥಿನಿಯನ್ನು ಯಾಮಿನಿ ಪ್ರಿಯ (20) ಎಂದು ಗುರುತಿಸಲಾಗಿದೆ.
ಬನಶಂಕರಿಯ ಕಾಲೇಜಿನಲ್ಲಿ ಬಿ ಫಾರ್ಮಸಿ ಓದುತ್ತಿದ್ದ ವಿದ್ಯಾರ್ಥಿನಿ ಇಂದು ಬೆಳಗ್ಗೆ ಮನೆಯಿಂದ ಕಾಲೇಜಿಗೆ ತೆರಳಿದ್ದಳು.
ಕಾಲೇಜಿನಿಂದ ಪರೀಕ್ಷೆ ಮುಗಿಸಿ ಮನೆಗೆ ಬರುತ್ತಿದ್ದಳು. ಮಲ್ಲೇಶ್ವರದ ಮಂತ್ರಿ ಮಾಲ್ ಬಳಿ ಇಳಿದು ರೈಲ್ವೆ ಟ್ರ‍್ಯಾಕ್ ಬಳಿ ಹೋಗ್ತಿದ್ದಾಗ ಹಿಂದಿನಿಂದ ಬಂದ ಪ್ರಿಯಕರ ಆಕೆಯ ಕತ್ತುಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದನೆ.
ಹಿಂದೆ ಬಿದ್ದದ್ದ ವಿಘ್ನೇಶ್ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಕೋಪಗೊಂಡ ಆತ ಯಾಮಿನಿಯನ್ನು ಹಿಂಬಾಲಿಸಿದ್ದಾನೆ.
ರೈಲ್ವೇ ಟ್ರ‍್ಯಾಕ್ ಬಳಿ ಬರುವಾಗ ಕಣ್ಣಿಗೆ ಖಾರದ ಪುಡಿ ಹಾಕಿ ಮನಸೋ ಇಚ್ಚೆ ದಾಳಿ ನಡೆಸಿದ್ದಾನೆ. ಕುತ್ತಿಗೆ ಹಾಗೂ ಮುಖದ ಭಾಗಕ್ಕೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದರಿಂದ ತೀವ್ರ ರಕ್ತಸ್ರಾವದಿಂದ ಯಾಮಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಸ್ಥಳಕ್ಕೆ ಆಗಮಿಸಿದ ಶ್ರೀರಾಂಪುರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.