Select Your Language

Notifications

webdunia
webdunia
webdunia
webdunia

ಬೆಂಗಳೂರು: ಕೊಲೆಯಾದ ಸ್ಥಿತಿಯಲ್ಲಿ ಮನೆಕೆಲಸದಾಕೆಯ ಮೃತದೇಹ ಪತ್ತೆ

Bengaluru Crime Case, Bangladesh Citizen No More,  RamaMurthyNagara Police Station

Sampriya

ಬೆಂಗಳೂರು , ಶುಕ್ರವಾರ, 24 ಜನವರಿ 2025 (18:28 IST)
ಬೆಂಗಳೂರು: ಮನೆಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರ ಮೃತದೇಹ ಹತ್ಯೆ ಮಾಡಿದ ಸ್ಥಿತಿಯಲ್ಲಿ ರಾಮಮೂರ್ತಿನಗರ ಠಾಣಾ ವ್ಯಾಪ್ತಿಯ ಕಲ್ಕೆರೆ ಕೆರೆ ಬಳಿ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ.

ಮೃತ ಮಹಿಳೆಯನ್ನು ಬಾಂಗ್ಲಾದೇಶದ ನಜ್ಮಾ ಎಂದು ಗುರುತಿಸಲಾಗಿದೆ.  ನಜ್ಮಾ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.

ಕಲ್ಕೆರೆಯ ಡಿಎಸ್​ಆರ್​​ನ ಅಪಾರ್ಟ್​ಮೆಂಟ್​ನಲ್ಲಿ ಮನೆಗೆಲಸ ಮಾಡುತ್ತಿದ್ದ ನಜ್ಮಾ ಅವರು ಸುಮನ್ ಎಂಬುವವರನ್ನು ಮದುವೆಆಯಗಿದ್ದರು. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ.

ನಜ್ಮಾ ಮೃತದೇಹ ಕೊಲೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಘಟನೆ ಬಗ್ಗೆ ಪೂರ್ವ ವಲಯದ ಹೆಚ್ಚುವರಿ ಕಮಿಷನರ್ ರಮೇಶ್ ಬಾನೋತ್​ ಹೇಳಿಕೆ ನೀಡಿದ್ದು, ಬೆಳಿಗ್ಗೆ 8.45ರ ಸುಮಾರಿಗೆ ರಾಮಮೂರ್ತಿನಗರ ಪೊಲೀಸ್ ಠಾಣೆಗೆ ಕರೆ ಬರುತ್ತೆ. ಇನ್‌ಸ್ಪೆಕ್ಟರ್‌ ತಕ್ಷಣ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಎಫ್​​ಎಸ್​ಎಲ್​ಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿಕೊಂಡು, ಬಾಡಿ ಶಿಫ್ಟ್ ಮಾಡಿದ್ದಾರೆ ಎಂದರು.

ಡಿಸಿಪಿ ಕೂಡ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ನಾನು ಭೇಟಿ ನೀಡಿದ್ದೆ. ಮೇಲ್ನೋಟಕ್ಕೆ ಚುಚ್ಚಿ, ಮುಖದ ಮೇಲೆ ಕಲ್ಲು ಎತ್ತಿ ಹಾಕಿದ್ದು ಕಂಡು ಬಂದಿದೆ. ಲೈಂಗಿಕಲ ದೌರ್ಜನ್ಯ ಮಾಡಿದ್ದು ಮೇಲ್ನೋಟಕ್ಕೆ ಕಂಡುಬರುತ್ತೆ. ಕೊಲೆ ಹಾಗೂ ಲೈಗಿಂಕ ದೌರ್ಜನ್ಯ ಅಂತ ಕೇಸ್ ಹಾಕಲಾಗಿದೆ. ಯಾರು ಕೊಲೆ ಮಾಡಿದ್ದು ಅಂತ ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಅಪಾರ್ಟ್​​ಮೆಂಟ್​ನಲ್ಲಿ ಕೆಲಸ ಮುಗಿಸಿ ಹೊರಟವರು ಮರಳಿ ಮನಗೆ ಹೋಗಿಲ್ಲ. ರಾತ್ರಿ ಅವರ ಪತಿ, ನಾಪತ್ತೆ ಅಂತ ದೂರು ನೀಡಿದ್ದರು. ಬೆಳಿಗ್ಗೆ ಶವ ಸಿಕ್ಕಿದೆ. ಅತ್ಯಾಚಾರ ಆಗಿದೆಯಾ ಅಂತ ಪೋಸ್ಟ್ ಮಾರ್ಟಂ ಬಳಿಕ ಗೊತ್ತಾಗುತ್ತೆ ಎಂದು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

B Sriramulu: ಎಲ್ಲೂ ಹೋಗಲ್ಲ, ಶ್ರೀರಾಮುಲು ಎಲ್ಲೂ ಹೋಗಲ್ಲ