ಬೆಂಗಳೂರು: ಶಾರ್ಟ್ ಸರ್ಕ್ಯೂಟ್ನಿಂದ ಎಲೆಕ್ಟ್ರಿಕ್ ಸ್ಕೂಟರ್ ಶೋರೂಂ ಹೊತ್ತು ಉರಿದು ಯುವತಿಯೊಬ್ಬಳು ಸಜೀವ ದಹನವಾದ ಘಟನೆ ನಗರದರಾಜ್ ಕುಮಾರ್ ರಸ್ತೆಯಲ್ಲಿ ನಡೆದಿದೆ.
ಈ ದುರ್ಘಟನೆಯಲ್ಲಿ ಶೋರೂಂನಲ್ಲಿ ಸೇಲ್ಸ್ ಗರ್ಲ್ ಆಗಿದ್ದ ಪ್ರಿಯಾ ಎಂಬ ಯುವತಿ ಸಾವಿಗೀಡಾಗಿದ್ದಾಳೆ. ಶೋರೂಮ್ ಧಗಧಗಿಸುತ್ತಿದ್ದಂತೆ ಹೊರಬರಲಾಗದೆ ಯುವತಿ ಒಳಗಡೆ ಸಿಲುಕಿದ್ದಳು. ಹೊರಬರಲಾರದೆ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಎರಡು ಅಗ್ನಿಶಾಮಕ ವಾಹನಗಳು ಬಂದಿದ್ದು, ಬೆಂಕಿ ನಂದಿಸಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ರಾಜ್ ಕುಮಾರ್ ರಸ್ತೆ, ನವರಂಗ್ ಬಾರ್ ಜಂಕ್ಷನ್ ಬಳಿ ಎಲೆಕ್ಟ್ರಿಕ್ ವೆಹಿಕಲ್ ಶೋರೂಮ್ ಗೆ ಬೆಂಕಿ ಹತ್ತಿದ್ದು, ಮೆಜೆಸ್ಟಿಕ್ ಯಿಂದ ಹೊರಹೋಗುವ ಮತ್ತು ಒಳಬರುವ ವಾಹನ ಸಂಚಾರವು ನಿದಾನಗತಿಯಲ್ಲಿರುತ್ತದೆ, ದಯಮಾಡಿ ಸಹಕರಿಸಿ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.