ಹೆಬ್ರಿ: ಉಡುಪಿ ಜಿಲ್ಲೆಯ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಬ್ಬಿನಾಲೆ ಅರಣ್ಯ ಪ್ರದೇಶದಲ್ಲಿ ಸೋಮವಾರ ರಾತ್ರಿ ನಡೆದ ಎನ್‌ಕೌಂಟರ್‌ನಲ್ಲಿ ಮೋಸ್ಟ್ ವಾಟೆಂಡ್ ನಕ್ಸಲ್ ನಾಯಕ ವಿಕ್ರಮ್ ಗೌಡ ಹತನಾಗಿದ್ದಾನೆ. ಸ್ಥಳಕ್ಕೆ ಐಜಿಪಿ ಡಿ ರೂಪಾ ಭೇಟಿ ನೀಡಿದರು. ಈ ವೇಳೆ ಮಾಧ್ಯಮದ ಜತೆ ಮಾತನಾಡಿದ ಅವರು, ವಿಕ್ರಂ ಗೌಡನ ಹಿನ್ನೆಲೆಯನ್ನು ಎಲೆ ಎಲೆಯಾಗಿ ಬಿಚ್ಚಿಟ್ಟರು.
ವಿಕ್ರಂ ಅಲಿಯಾಸ್ ಶ್ರೀಕಾಂತ್ ಅವರು ಕರ್ನಾಟಕದ ಮೋಸ್ಟ್ ವಾಟೆಂಡ್ ನಕ್ಸಲ್. ಪೊಲೀಸ್ ಹಾಗೂ ನಕ್ಸಲರ ನಡುವಿನ ಗುಂಡಿನ ಚಕಮಕಿಯಲ್ಲಿ ವಿಕ್ರಂ ಮೃತಪಟ್ಟಿದ್ದಾರೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದರು.
ಮರ್ಡರ್ ಸೇರಿದಂತೆ ವಿಕ್ರಂ ವಿರುದ್ಧ 61ಪ್ರಕರಣಗಳು ದಾಖಲಾಗಿದೆ. ಅದಲ್ಲದೆ 19ಕೇಸ್‌ಗಳು ಕೇರಳದಲ್ಲಿ ದಾಖಲಾಗಿದೆ. ಇರುವ ನಕ್ಸಲರ ಪೈಕಿ ವಿಕ್ರಂ ಗೌಡ ಮೋಸ್ಟ್ ವಾಟೆಂಡ್ ಲಿಸ್ಟ್‌ನಲ್ಲಿದ್ದರು ಎಂದು ಮಾಹಿತಿ ನೀಡಿದರು.
ನಕ್ಸರ ಇರುವ ಮಾಹಿತಿ ಮೇರೆಗೆ ಕಳೆದ 10ದಿನಗಳಿಂದ ನಿರಂತರ ಕಾರ್ಯಚರಣೆ ನಡೆಸಿದ್ದೇವೆ. ಇದೀಗ ಯಶಸ್ವಿಯಾಗಿದೆ. ಇನ್ನೂ ವಿಕ್ರಂ ಗೌಡ ಜತೆ ಮೂರು ನಾಲ್ಕು ಜನ ಇದ್ದರು. ಮುಂದೆ ಅವರು ಯಾವ ರೀತಿ ರೆಸ್ಪಾನ್ಸ್ ಮಾಡುತ್ತಾರೆ ಎಂದು ನೋಡಬೇಕು. ಮುಂದಿನ ದಿನಗಳಲ್ಲೂ ಕೂಂಬಿಂಗ್ ಜಾರಿಯಲ್ಲಿರಲಿದೆ ಎಂದರು.