Select Your Language

Notifications

webdunia
webdunia
webdunia
webdunia

ದಿವಾಳಿಯಾಗಿದೆಯಾ ಕಾಂಗ್ರೆಸ್‌ ಸರ್ಕಾರ, ದುಡ್ಡಿಲ್ಲದ ಖಾಲಿ 'ಕೈ' ಆಡಳಿತ

Karnataka Congress Government, Central Minister HD Kumaraswamy, JDS Party

Sampriya

ಬೆಂಗಳೂರು , ಮಂಗಳವಾರ, 19 ನವೆಂಬರ್ 2024 (15:06 IST)
ಬೆಂಗಳೂರು: ರಾಜು ಕಾಗೆ ಬಳಿಕ ಈಗ ಮತ್ತೊಬ್ಬ ಕಾಂಗ್ರೆಸ್ ಶಾಸಕರಾದ ಗವಿಯಪ್ಪ , ನಮ್ಮ ಕ್ಷೇತ್ರಕ್ಕೆ ಅನುದಾನ ಕೊಡ್ತಿಲ್ಲ ಎಂದು ಕಣ್ಣೀರು ಹಾಕುತ್ತಿರುವುದು ಸಿದ್ದರಾಮಯ್ಯ ಸರ್ಕಾರದ ದಿವಾಳಿತನಕ್ಕೆ ಸಾಕ್ಷಿ ಎಂದು ಜೆಡಿಎಸ್‌ ಹೇಳಿದೆ.

ಶಾಸಕ ಗವಿಯಪ್ಪ ಅವರು ಅಸಮಾಧಾನ ವ್ಯಕ್ತಪಡಿಸುತ್ತಿರುವ ವಿಡಿಯೋ ಹಂಚಿ ಜೆಡಿಎಸ್‌ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದೆ.

ಪೋಸ್ಟ್‌ನಲ್ಲಿ ಹೀಗಿದೆ:  ದಿವಾಳಿಯಾಗಿದೆಯಾ ಕಾಂಗ್ರೆಸ್‌ ಸರ್ಕಾರ, ದುಡ್ಡಿಲ್ಲದ ಖಾಲಿ ‘ಕೈ’ ಆಡಳಿತ

ರಾಜು ಕಾಗೆ ಬಳಿಕ ಈಗ ಮತ್ತೊಬ್ಬ ಕಾಂಗ್ರೆಸ್ ಶಾಸಕರಾದ ಗವಿಯಪ್ಪ , ನಮ್ಮ ಕ್ಷೇತ್ರಕ್ಕೆ ಅನುದಾನ ಕೊಡ್ತಿಲ್ಲ ಎಂದು ಕಣ್ಣೀರು ಹಾಕುತ್ತಿರುವುದು ಸಿದ್ದರಾಮಯ್ಯ ಸರ್ಕಾರದ ದಿವಾಳಿತನಕ್ಕೆ ಸಾಕ್ಷಿ..

ಹೊಸದಾಗಿ ರಚನೆಯಾದ ವಿಜಯನಗರ ಜಿಲ್ಲೆಗೆ ಬರೀ‌ 10 ಕೋಟಿ ಅನುದಾನ‌ ಕೊಡಲಾಗಿದೆ ಎಂದು ಶಾಸಕ ಗವಿಯಪ್ಪ ಅಸಮಾಧಾನ ತೋಡಿಕೊಂಡಿದ್ದಾರೆ. ಹಿಂದಿನ ಸರ್ಕಾರ ಸಾಕಷ್ಟು ಅಭಿವೃದ್ಧಿ ಮಾಡಿದೆ.. ಆದರೆ ಈ ಬಾರಿ ಅನುದಾನ ಸಿಗದೆ, ಕ್ಷೇತ್ರದಲ್ಲಿ ಆಸ್ಪತ್ರೆಗಳು, ರಸ್ತೆಗಳ ಸಮಸ್ಯೆಗಳು ಸಾಕಷ್ಟಿದೆ. ಜನರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಆಗುತ್ತಿಲ್ಲ ಎಂದು ತಮ್ಮ  ಸರ್ಕಾರದ ವಿರುದ್ಧವೇ ಕಿಡಿಕಾರಿರುವುದು ಭ್ರಷ್ಟ ಕಾಂಗ್ರೆಸ್ ಸರ್ಕಾರದ ಅದಕ್ಷ ಆಡಳಿತಕ್ಕೆ ಉದಾಹರಣೆ.

ಗ್ಯಾರಂಟಿ ಯೋಜನೆಗಳಿಗೆ ಹಣಹೊಂದಿಸಲು ಹೆಣಗಾಡುತ್ತಿರುವ ಸಿಎಂ,  ಶಾಸಕರ ಕ್ಷೇತ್ರಗಳಿಗೆ ಅನುದಾನ ಕೊಡುತ್ತಿಲ್ಲ.‌ ಸ್ವತಃ ಕಾಂಗ್ರೆಸ್ ಶಾಸಕರೇ ತಮ್ಮ ಕ್ಷೇತ್ರಕ್ಕೆ ಅನುದಾನ ಕೊಡಿ ಎಂದು ಕಣ್ಣೀರಿಡುತ್ತಿದ್ದರೂ ಮುಖ್ಯಮಂತ್ರಿಗಳು ಕಿವಿಗೊಡುತ್ತಿಲ್ಲ..ಯಾಕಂದರೆ ಸರ್ಕಾರದ ಬೊಕ್ಕಸ ಖಾಲಿ ಮಾಡಿರುವುದೇ ಸಿದ್ದರಾಮಯ್ಯ ಅವರ ಸಾಧನೆ.


Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಗೆ ಮತ ಹಾಕದವರಿಗೆ ಬಿಪಿಎಲ್ ಕಾರ್ಡ್ ರದ್ದು: ಸಿಟಿ ರವಿ ಗಂಭೀರ ಆರೋಪ