Select Your Language

Notifications

webdunia
webdunia
webdunia
webdunia

Riya Barde: ಬಾಂಗ್ಲಾ ನೀಲಿ ಚಿತ್ರತಾರೆ ರಿಯಾ ಬಾರ್ಡೆ ಬಂಧನ: ಆಕೆ ಮಾಡಿರುವ ಅಪರಾಧವೇನು ಗೊತ್ತಾ

Riya Barde

Krishnaveni K

ಮಹಾರಾಷ್ಟ್ರ , ಶುಕ್ರವಾರ, 27 ಸೆಪ್ಟಂಬರ್ 2024 (14:01 IST)
Photo Credit: X
ಮಹಾರಾಷ್ಟ್ರ: ಬಾಂಗ್ಲಾ ಮೂಲದ ನೀಲಿ ಚಿತ್ರತಾರೆ ರಿಯಾ ಬಾರ್ಡೆ ಅಲಿಯಾಸ್ ಆರೋಹಿ ಬಾರ್ಡೆಯನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ಅಕ್ರಮವಾಗಿ ಭಾರತದಲ್ಲಿ ವಾಸ ಮಾಡುತ್ತಿರುವ ಕಾರಣಕ್ಕೆ ಆಕೆಯನ್ನು ಬಂಧಿಸಲಾಗಿದೆ.

ರಿಯಾ ಅವರನ್ನು ಮಹಾರಾಷ್ಟ್ರದ ಉಲ್ಹಾಸ್ನಗರದ ಪೊಲೀಸರು ಬಂಧಿಸಿದ್ದಾರೆ. ತನ್ನ ತಾಯಿ ಮತ್ತು ಒಡಹುಟ್ಟಿದವರೊಂದಿಗೆ ರಿಯಾ ಅಕ್ರಮವಾಗಿ ಭಾರತದಲ್ಲಿ ನೆಲೆಯೂರಿದ್ದಾಳೆ ಎಂಬುದು ಆರೋಪವಾಗಿದೆ. ಇದಕ್ಕಾಗಿ ಅಮರಾವತಿಯ ವ್ಯಕ್ತಿಯೊಬ್ಬರನ್ನು ರಿಯಾ ತಾಯಿ ಮದುವೆಯೂ ಆಗಿದ್ದರು.

ರಿಯಾ ಮಾತ್ರವಲ್ಲದೆ ಆಕೆಯ ಇಡೀ ಕುಟುಂಬದವರ ಮೇಲೆ ಕೇಸ್ ದಾಖಲಿಸಲಾಗಿದೆ. ರಿಯಾ ತಾಯಿ ಬಾಂಗ್ಲಾದೇಶದವರಾಗಿದ್ದು ಅಕ್ರಮವಾಗಿ ತನ್ನ ಮಕ್ಕಳೊಂದಿಗೆ ಇಲ್ಲಿ ವಾಸವಾಗಿದ್ದಾಳೆ ಎಂಬುದು ತಿಳಿದುಬಂದಿದೆ. ರಿಯಾ ತಾಯಿ ತಾನು ಪಶ್ಚಿಮ ಬಂಗಾಲದವಳು ಎಂದು ಸುಳ್ಳು ಹೇಳಿ ಅಮರಾವತಿ ನಿವಾಸಿ ಅರವಿಂದ್ ಬಾರ್ಡೆ ಎಂಬವರನ್ನು ಮದುವೆಯಾಗಿದ್ದಳು.

ಬಳಿಕ ತಾನು ಭಾರತೀಯಳು ಎಂದು ಸಾಬೀತುಪಡಿಸಲು ಜನನ ಪ್ರಮಾಣ ಪತ್ರ, ಇತರೆ ದಾಖಲೆಗಳನ್ನು ನಕಲಿ ಮಾಡಿಸಿ ಭಾರತೀಯ ಪಾಸ್ಪೋರ್ಟ್ ಮಾಡಿಸಿಕೊಂಡಿದ್ದಳು. ಇದೀಗ ರಿಯಾಳನ್ನು ಬಂಧಿಸಲಾಗಿದ್ದು, ಆಕೆಯ ಪೋಷಕರು ಕತಾರ್ ನಲ್ಲಿದ್ದಾರೆಂದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರು ದಸರಾ ವೀಕ್ಷಿಸಬೇಕೆಂದರೆ ಟಿಕೆಟ್ ಬಲು ದುಬಾರಿ: ಇಲ್ಲಿದೆ ಟಿಕೆಟ್ ದರ ವಿವರ