Select Your Language

Notifications

webdunia
webdunia
webdunia
webdunia

ನರಸತ್ತ ಕಾಂಗ್ರೆಸ್ ಆಡಳಿತದಲ್ಲಿ ರೌಡಿಗಳಿಗೆ ಲಗಾಮು ಹಾಕುವ ಶಕ್ತಿಯಿಲ್ಲ

Bengaluru Crime Case, Karnatala Congress Party, JDS Party,

Sampriya

ಬೆಂಗಳೂರು , ಗುರುವಾರ, 6 ಫೆಬ್ರವರಿ 2025 (16:07 IST)
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಲಾಂಗ್ ತೋರಿಸಿ ಬೆದರಿಕೆ ಹಾಕುತ್ತಿರುವ ಪ್ರಕರಣಗಳು ಜಾಸ್ತಿಯಾಗುತ್ತಲೇ ಇದೆ. ಈಚೆಗೆ ಕೋರಮಂಗಲ 80 ಫೀಟ್ ರೋಡ್ ಸೆಕೆಂಡ್ ಸ್ಟೇಜ್ ಅಂಗಡಿಯಲ್ಲಿ  ಲಾಂಗ್ ತೋರಿಸಿ ಅಂಗಡಿ ಮಾಲೀಕನಿಗೆ ಬೆದರಿಕೆ ಹಾಕಿದ ಘಟನೆ ನಡೆದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಬಗ್ಗೆ ಜೆಡಿಎಸ್‌ ಎಕ್ಸ್‌ನಲ್ಲಿ ಪೋಸ್ಟ್ ಹಾಕಿ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.  ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಪುಡಿ ರೌಡಿಗಳ ಹಾವಳಿ ಹೆಚ್ಚಾಗಿದ್ದು ದರೋಡೆ ಅತ್ಯಾಚಾರ  ರೌಡಿ  ಹಾವಳಿ ಮಿತಿಮೀರಿದೆ.

ಅದಕ್ಷ ಆಡಳಿತ ನಡೆಸುತ್ತಿರುವ  ಸಿದ್ದರಾಮಯ್ಯ ಮತ್ತು   ಅಸಮರ್ಥ ಗೃಹ ಸಚಿವ ಡಾ.ಪರಮೇಶ್ವರ್‌  ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ.  

ಕಾನೂನು ಸುವ್ಯವಸ್ಥೆಯನ್ನು ಹತೋಟಿ ಮಾಡಲಾಗದ  ನೀವು ಆಸ್ಥಾನದಲ್ಲಿ ಮುಂದುವರೆಯಲು ಅರ್ಹರಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.


====

ಬೆಂಗಳೂರು:- ರಾಜಧಾನಿ ಬೆಂಗಳೂರಲ್ಲಿ ಅಂಗಡಿಯವರಿಗೆ ಲಾಂಗ್ ತೋರಿಸಿ ಬೆದರಿಕೆ ಕೇಸ್ ಗಳು ಹೆಚ್ಚಾಗಿದೆ.

ಏನಾಗ್ತಿದೆ ಬೆಂಗಳೂರಲ್ಲಿ ಅಂಗಡಿ ಬರ್ತಾರೆ ಲಾಂಗ್ ತೋರಿಸ್ತಾರೆ ಅನ್ನೋ ಹಾಗೆ ಆಗಿದೆ. ಅಂಗಡಿ ಬೇಕರಿಗೆ ನುಗ್ಗಿ ದಾಂಧಲೆ ಮಾಡಿ ಬೆದರಿಸುವ ಪ್ರಕರಣಗಳು ಇತ್ತೀಚೆಗೆ ವರದಿಗಳು ಹೆಚ್ಚಾಗಿ ಬರುತ್ತಿದೆ.

ಬೆಂಗಳೂರಲ್ಲಿ ಪುಂಡ ಪೋಕರಿಗಳಿಗೆ ಸ್ವಲ್ಪವೂ ಭಯ ಇಲ್ಲದಂತೆ ವರ್ತಿಸುತ್ತಿದ್ದಾರೆ. ಅಂಗಡಿಗೆ ಬಂದು ಲಾಂಗ್ ತೋರಿಸಿ ಫ್ರೀಯಾಗಿ ತೆಗೆದುಕೊಂಡು ಹೋಗ್ತಾನೆ . ಫ್ರೀಯಾಗಿ ಕೊಡದೆ ಇದ್ರೆ ಲಾಂಗ್ ತೋರಿಸಿ ಅವಾಜ್ ಹಾಕಿ ವಸೂಲಿ ಮಾಡುತ್ತಿದ್ದಾರೆ.

ಇಲ್ಲೋರ್ವ ಭೂಪ, ಅಂಗಡಿ ಮಾಲೀಕನಿಗೆ ಲಾಂಗ್ ತೋರಿಸಿ ಬೆದರಿಕೆ ಹಾಕಿದ್ದಾನೆ.

ನಿನ್ನೆ ಅಂಗಡಿಗೆ ಬಂದು ಆಸಾಮಿ ಲಾಂಗ್ ತೋರಿಸಿ ಬೆದರಿಸಿದ್ದಾನೆ.

ಅಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ ಜರುಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು: ಸಿಲಿಂಡರ್ ಸೋರಿಕೆಯಾಗಿ ಕಟ್ಟಡಕ್ಕೆ ಬೆಂಕಿ, ಇಬ್ಬರು ಕಾರ್ಮಿಕರು ಸಾವು