Select Your Language

Notifications

webdunia
webdunia
webdunia
webdunia

ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆಗೆ ಶರಣಾದ ತಾಯಿ, ಪತಿಯ ಈ ಬೆದರಿಕೆಯೇ ಕಾರಣವಾಯಿತೇ

Bengaluru Crime Case

Sampriya

ಬೆಂಗಳೂರು , ಶುಕ್ರವಾರ, 10 ಅಕ್ಟೋಬರ್ 2025 (17:47 IST)
ಬೆಂಗಳೂರು: ರಾಜ್ಯ ರಾಜಧಾನಿಯ ಬಾಗಲಗುಂಟೆ ಪಾಳ್ಯ ಭುವನೇಶ್ವರಿ ನಗರದಲ್ಲಿ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಕೊಂದು, ತಾನೂ ಆತ್ಮಹತ್ಯೆಗೆ ಶರಣಾದ ಕರುಣ ಹಿಂಡುವ ಘಟನೆ ವರದಿಯಾಗಿದೆ. 

ಐದು ವರ್ಷದ ಪುತ್ರಿ ಹಾಗೂ ಒಂದೂವರೆ ವರ್ಷದ ಪುತ್ರನ ಕೊಂದು ತಾಯಿ ವಿಜಯಲಕ್ಷ್ಮಿ ಎಂಬವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬಾಗಲಗುಂಟೆ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 5 ವರ್ಷದ ಹಿಂದೆ ವಿಜಯಲಕ್ಷ್ಮಿ, ರಮೇಶ್​ ಎಂಬಾತನ ಜೊತೆ ಮದುವೆ ಮಾಡಿಕೊಂಡಿದ್ರು. 

ಆಕೆಯ ಪತಿ ಮಾಲ್​ನಲ್ಲಿ ಕೆಲಸ ಮಾಡುತ್ತಿದ್ದ. ಬೆಂಗಳೂರಲ್ಲಿ ನೆಲೆಸಿದ್ದ ಈ ದಂಪತಿಗೆ 4 ವರ್ಷದ ಬೃಂದಾ, ಒಂದೂವರೆ ವರ್ಷದ ಭುವನ್​ ಎಂಬ ಇಬ್ಬರು ಮಕ್ಕಳಿದ್ದರು. 

ಕೌಟುಂಬಿಕ ಕಲಹದಿಂದ ಆತ್ಮಹರತ್ಯೆಗೆ ಶರಣಾಗಿದ್ದಾರೆ ನ್ನಲಾಗಿದೆ. 

ಇನ್ನೂ ವಿಜಯಲಕ್ಷ್ಮಿ ಅವರ ತಂಗಿ ಮನೆಗೆ ಬಂದು ನೋಡಿದಾಟಗ ಘಟನೆ ಬೆಳಕಿಗೆ ಬಮದಿದೆ. 

ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತಳ ಕುಟುಂಬದವರು ಆಕೆಯ ಪತಿ ರಮೇಶ್ ಆಕೆಗೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. 

ತಾನು ಮತ್ತೊಂದು ಮದುವೆಯಾಗಿದ್ದೇನೆಂದು ಡೈವೋರ್ಸ್ ಕೊಡುವಂತೆ ಪತ್ನಿಗೆ ಪತಿ ರಮೇಶ್​ ಬೆದರಿಕೆ ಹಾಕುತ್ತಿದ್ದ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಹೀಗಾಗಿ ಪದೇ ಪದೆ ಕುಟುಂಬದಲ್ಲಿ ಜಗಳ ಆಗುತ್ತಿತ್ತು. ಈ ವಿಚಾರ ವಿಜಯಲಕ್ಷ್ಮಿ ತನ್ನ ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದಳು ಎನ್ನಲಾಗಿದೆ. ಇದರಿಂದ ನೊಂದು ವಿಜಯಲಕ್ಷ್ಮಿ, ಮಕ್ಕಳ ಜತೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಶ್ರಫ್ ಕೊಲೆ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾಗಿದ್ದ ಆರೋಪಿ ಭರತ್‌ಗೆ ಬಿಗ್ ಶಾಕ್