Daily Horoscope

Select Your Language

Notifications

webdunia
webdunia
webdunia
webdunia

ಅಜಿತ್ ಪವಾರ್ ವಿಮಾನ ದುರಂತಕ್ಕೆ ಬಿಗ್ ಟ್ವಿಸ್ಟ್: ಕೊನೆಯ ಕ್ಷಣದಲ್ಲಿ ಆಗಿದ್ದೇನು

Ajit Pawar plane crash
ಬಾರಾಮತಿ: ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಬಲಿಯಾದ ವಿಮಾನ ದುರಂತ ಘಟನೆಗೆ ಸಂಬಧಿಸಿದಂತೆ ರೋಚಕ ಸುದ್ದಿಯೊಂದು ಹೊರಬರುತ್ತಿದೆ.

ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಮೊನ್ನೆ ಬಾರಾಮತಿಯಲ್ಲಿ ಲ್ಯಾಂಡಿಂಗ್ ವೇಳೆ ಅವಘಡವಾಗಿ ಬೆಂಕಿಗೆ ಸುಟ್ಟು ಭಸ್ಮವಾಗಿತ್ತು. ದುರಂತದಲ್ಲಿ ಅಜಿತ್ ಪವಾರ್, ಇಬ್ಬರು ಪೈಲೆಟ್ ಗಳು, ಅಜಿತ್ ಪವಾರ್ ಆಪ್ತ, ಪೈಲೆಟ್ ಅಟೆಂಡೆಂಟ್ ಸಾವನ್ನಪ್ಪಿದ್ದರು.

ಘಟನೆಗೆ ಸಂಬಂಧಿಸಿದಂತೆ ರೋಚಕ ವಿಚಾರವೊಂದು ಈಗ ಹೊರಬೀಳುತ್ತಿದೆ. ಅಜಿತ್ ಪವಾರ್ ಸಂಚರಿಸುತ್ತಿದ್ದ ವಿಮಾನದ ಪೈಲೆಟ್ ಕೊನೇ ಕ್ಷಣದಲ್ಲಿ ಬದಲಾಗಿದ್ದರು ಎನ್ನಲಾಗಿದೆ. ಕ್ಯಾಪ್ಟನ್ ಸುಮಿತ್ ಕಪೂರ್ ಕೊನೆಯ ಕ್ಷಣದಲ್ಲಿ ಪೈಲೆಟ್ ಆಗಿ ವಿಮಾನವೇರಿದ್ದರು. ಮೊದಲೇ ನಿಗದಿಯಾಗಿದ್ದ ಪೈಲೆಟ್ ಟ್ರಾಫಿಕ್ ನಲ್ಲಿ ಸಿಲುಕಿಕೊಂಡು ಬರಲಾಗಲಿಲ್ಲ. ಈ ಕಾರಣಕ್ಕೆ ಸುಮಿತ್ ವಿಮಾನವೇರಿದ್ದರು ಎನ್ನಲಾಗಿದೆ. ಸಾವು ಹಣೆಯಲ್ಲಿ ಬರೆದಿದ್ದರೆ ಯಾರೂ ತಪ್ಪಿಸಲು ಸಾಧ್ಯವಾಗಲ್ಲ ಎನ್ನುವುದಕ್ಕೆ ಇದೇ ನಿದರ್ಶನ. ಕ್ಯಾಪ್ಟನ ಸುಮಿತ್ ಅನುಭವಿ ಪೈಲೆಟ್. ಹಾಗಿದ್ದರೂ ಇಂತಹ ಸಮಸ್ಯೆಯಾಗಿದ್ದು ಹೇಗೆ ಎಂಬುದೇ ಎಲ್ಲರ ಪ್ರಶ್ನೆಯಾಗಿದೆ. ನಿಜಕ್ಕೂ ಅಲ್ಲಿ ವಿಮಾನ ಪತನಕ್ಕೆ ಕಾರಣವಾಗಿದ್ದು ಏನು ಎಂಬ ಅಂಶದ ಬಗ್ಗೆ ಈಗ ತನಿಖೆಯಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ