ಭಾರಾಮತಿ: ಮಹಾರಾಷ್ಟ್ರದ ಭಾರಾಮತಿಯಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಡಿಸಿಎಂ ಅಜಿತ್ ಪವಾರ್ ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ. ಈ ದುರ್ಘಟನೆಗೆ ನಿಜವಾದ ಕಾರಣವೇನೆಂದು ಈಗ ಬಯಲಾಗಿದೆ.
ಭಾರಾಮತಿಯಲ್ಲಿ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದಾಗ ಇನ್ನೇನು ಲ್ಯಾಂಡಿಂಗ್ ಆಗಲು ಕೆಲವೇ ಕ್ಷಣಗಳಿದ್ದಾಗ ವಿಮಾನ ಪತನವಾಗಿದೆ. ವಿಮಾನ ಪತನವಾದ ತಕ್ಷಣ ಉರಿದು ಭಸ್ಮವಾಗಿದ್ದು, ಒಳಗಿದ್ದ ಆರೂ ಮಂದಿಯೂ ಸುಟ್ಟು ಕರಕಲಾಗಿದ್ದಾರೆ.
ವಿಮಾನ ಪತನವಾಗಲು ನಿಜಕ್ಕೂ ಅಂತಹ ಸಮಸ್ಯೆಯೇನಾಗಿತ್ತು ಎಂಬ ಬಗ್ಗೆ ಈಗ ತನಿಖೆ ನಡೆಯುತ್ತಿದೆ. ಪ್ರಾಥಮಿಕ ವರದಿಗಳ ಪ್ರಕಾರ, ದಟ್ಟ ಮಂಜಿನಿಂದಾಗಿ ಲ್ಯಾಂಡಿಂಗ್ ಆಗಲು ಗೋಚರತೆ ಕಡಿಮಯಾಗಿತ್ತು. ದಟ್ಟ ಮಂಜು ಮತ್ತು ಕಡಿಮೆ ಗೋಚರತೆಯಿಂದಲೇ ದುರಂತ ಸಂಭವಿಸಿರಬಹುದು ಎನ್ನಲಾಗಿದೆ.
ವಿಮಾನ ಪತನವಾದ ರಭಸಕ್ಕೆ ತಕ್ಷಣವೇ ಬೆಂಕಿ ಹತ್ತಿಕೊಂಡಿದೆ. ಅಂತಿಮ ಕ್ಷಣದಲ್ಲಿ ವಿಮಾನದೊಳಗೆ ಏನಾಗಿತ್ತು ಎಂಬುದು ಡೇಟಾ ರೆಕಾರ್ಡರ್ ಮತ್ತು ಕಾಕ್ ಪಿಟ್ ವಾಯ್ಸ್ ರೆಕಾರ್ಡರ್ ನಲ್ಲಿ ಏನು ದಾಖಲಾಗಿದೆ ಎಂಬ ಮಾಹಿತಿಯಂದ ತಿಳಿದುಬರಲಿದೆ.