Publish Date: Thu, 29 Jan 2026 (09:45 IST)
Updated Date: Thu, 29 Jan 2026 (09:49 IST)
ಭಾರಾಮತಿ: ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಇದ್ದ ವಿಮಾನ ಲ್ಯಾಂಡಿಂಗ್ ಗೆ ಮುನ್ನ ಪತನವಾಗುವ ಕೆಲವೇ ಕ್ಷಣಗಳ ಮುನ್ನ ಕಾಕ್ ಪೀಟ್ ನಲ್ಲಿ ದಾಖಲಾದ ಆ ಒಂದು ಮಾತು ಏನು ಎಂಬುದು ಈಗ ಬಯಲಾಗಿದೆ.
ಲ್ಯಾಂಡಿಂಗ್ ಗೆ ಪ್ರಯತ್ನ ಪಡುವಾಗ ವಿಮಾನ ಪತನವಾಗಿದೆ. ಇದಕ್ಕೆ ದಟ್ಟ ಮಂಜಿನಿಂದಾಗಿ ಪೈಲೆಟ್ ಗೆ ರನ್ ವೇ ಸರಿಯಾಗಿ ಗೋಚರವಾಗದೇ ಇದ್ದಿದ್ದು ಕಾರಣವೆಂದು ಶಂಕಿಸಲಾಗಿದೆ. ರನ್ ವೇಯ ಕೆಲವೇ ಮೀಟರ್ ಗಳ ಅಂತರದಲ್ಲಿ ವಿಮಾನ ಪತನವಾಗಿದೆ.
ಪತನವಾಗುವ ಕೊನೆಯ ಕ್ಷಣದವರೆಗೂ ಏರ್ ಕಂಟ್ರೋಲರ್ ಜೊತೆಗೆ ಪೈಲೆಟ್ ಸಂಪರ್ಕದಲ್ಲಿದ್ದರು. ಆದರೆ ಕೊನೆಯ ಕೆಲವೇ ಸೆಕೆಂಡು ಪ್ರತಿಕ್ರಿಯೆ ಬರಲಿಲ್ಲ. ಇದಾದ ಕ್ಷಣದಲ್ಲೇ ಪತನವಾಗಿತ್ತು. ವಿಮಾನ ಪತನಕ್ಕೆ ಮುನ್ನ ಪೈಲೆಟ್ ಮೇ ಡೇ ಎಂದು ಕೂಗಿದ್ದರು ಎನ್ನಲಾಗಿದೆ.
ಅಲ್ಲದೆ, ಏರ್ ಕ್ಲಿಯರೆನ್ಸ್ ಪಡೆದ ಬಳಿಕ ಲ್ಯಾಂಡ್ ಆಗುವ ಪ್ರಯತ್ನದಲ್ಲಿದ್ದಾಗ ಏನೋ ಸಮಸ್ಯೆಯಾಗಿರುವುದು ನಿಜ. ಯಾಕೆಂದರೆ ಕಾಕ್ ಪೀಟ್ ನಲ್ಲಿದ್ದ ಪೈಲೆಟ್ ಗಳು ಓಹ್ ಶಿಟ್... ಎಂದು ಗಾಬರಿಯಿಂದ ಕೂಗಿಕೊಂಡಿದ್ದು ದಾಖಲಾಗಿದೆ. ಇದೇ ಅವರ ಕೊನೆಯ ಮಾತುಗಳು ಎನ್ನಲಾಗಿದೆ.