Daily Horoscope

Select Your Language

Notifications

webdunia
webdunia
webdunia
webdunia

ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಸರಣಿ ಅಪಘಾತ: ನಟ ಮಯೂರ್ ಪಟೇಲ್ ವಿರುದ್ಧ ಕೇಸ್

Mayur Patel
Photo Credit: Instagram
ಬೆಂಗಳೂರು: ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಸರಣಿ ಅಪಘಾತ ಮಾಡಿದ ಆರೋಪ ಸ್ಯಾಂಡಲ್ ವುಡ್ ನಟ ಮಯೂರ್ ಪಟೇಲ್ ವಿರುದ್ಧ ದಾಖಲಾಗಿದೆ. ಈ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಓಲ್ಡ್ ಏರ್ ಪೋರ್ಟ್ ರಸ್ತೆಯ ಕಮಾಂಡೊ ಸಿಗ್ನಲ್ ಬಳಿ ನಿನ್ನೆ ರಾತ್ರಿ ಸುಮಾರು 10 ಗಂಟೆಗೆ ಘಟನೆ ನಡೆದಿದೆ. ಸಿಗ್ನಲ್ ನಲ್ಲಿ ನಿಂತಿದ್ದ ಕಾರುಗಳಿಗೆ ಮಯೂರ್ ಪಟೇಲ್ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ, ಒಂದಕ್ಕೊಂದು ಕಾರುಗಳು ಢಿಕ್ಕಿಯಾಗಿವೆ.

ಮಯೂರ್ ಪಟೇಲ್ ವಿರುದ್ಧ ಅಜಾಗರೂಕತೆ ಚಾಲನೆ, ಅತೀ ವೇಗದ ಚಾಲನೆ ಪ್ರಕರಣ ದಾಖಲಾಗಿದೆ. ಈ ಘಟನೆಯಲ್ಲಿ ಒಟ್ಟು ನಾಲ್ಕು ಕಾರುಗಳಿಗೆ ಹಾನಿಯಾಗಿದೆ. ಇದರಲ್ಲಿ ಒಂದು ಸರ್ಕಾರೀ ಕಾರು ಕೂಡಾ ಒಳಗೊಂಡಿದೆ ಎನ್ನಲಾಗಿದೆ.

ಘಟನೆಯಲ್ಲಿ ಎರಡು ಸ್ವಿಫ್ಟ್ ಡಿಝೈರ್ ಕಾರು, ಒಂದು ಸರ್ಕಾರಿ ಕಾರಿಗೆ ಹಾನಿಯಾಗಿದೆ. ಮಯೂರ್ ಪಟೇಲ್ ರನ್ನು ವಶಕ್ಕೆ ಪಡೆದ ಪೊಲೀಸರು ಡ್ರಿಂಕ್ಸ್ ಮಾಡಿದ್ದಾರೆಯೇ ಎಂದು ಪರಿಶೀಲನೆ ಮಾಡಿದಾಗ ಮಾಡಿರುವುದು ಖಚಿತವಾಗಿದೆ. ಈ ಸಂಬಂಧ ಹಲಸೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರು ಚಾಲಕ ಶ್ರೀನಿವಾಸ್ ಎಂಬವರು ದೂರು ನೀಡಿದ್ದಾರೆ. ಸಾಲ ಸೋಲ ಮಾಡಿ ಕಾರು ಖರೀದಿಸಿ ಕೇವಲ ಒಂದು ವಾರವಾಗಿದೆಯಷ್ಟೇ. ಅಷ್ಟರಲ್ಲಿ ಈ ರೀತಿ ಆಗಿದೆ ಎಂದು ಅವರು ಕಣ್ಣೀರು ಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಕರ್ನಾಟಕದ ಇಂದಿನ ಹವಾಮಾನ ವರದಿ ಇಲ್ಲಿದೆ