Publish Date: Thu, 29 Jan 2026 (09:08 IST)
Updated Date: Thu, 29 Jan 2026 (09:10 IST)
ಬೆಂಗಳೂರು: ಕರ್ನಾಟಕದಲ್ಲಿ ಕಳೆದ ನಾಲ್ಕು ದಿನಗಳಿಂದ ಮೋಡ ಕವಿದ ವಾತಾವರಣ ಕಂಡುಬರುತ್ತಿದೆ. ಇಂದಿನ ಹವಾಮಾನ ಹೇಗಿರಲಿದೆ ಇಲ್ಲಿದೆ ವಿವರ.
ರಾಜ್ಯದಲ್ಲಿ ಈ ವಾರ ಹವಾಮಾನದಲ್ಲಿ ವಿಪರೀತ ಏರು-ಪೇರು ಕಂಡುಬರುತ್ತಿದೆ. ವಾರದ ಆರಂಭದಲ್ಲಿ ಬೆಂಗಳೂರಿನ ಸುತ್ತಮುತ್ತಲ ಜಿಲ್ಲೆಗಳಲ್ಲಿ ಮಳೆಯಾಗಿತ್ತು. ಉಳಿದ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ-ಬಿಸಿಲು ಕಂಡುಬಂದಿತ್ತು.
ಬೆಳಗಿನ ವೇಳೆ ಬಿಸಿಲು, ಸಂಜೆ ನಂತರ ಮೋಡ ಮುಸುಕಿದ ವಾತಾವರಣ ಕಂಡುಬರುತ್ತಿತ್ತು. ಇಂದು ರಾಜ್ಯದಲ್ಲಿ ಒಟ್ಟಾರೆಯಾಗಿ ಸಂಪೂರ್ಣ ಬಿಸಿಲಿನ ವಾತಾವರಣವಿರಲಿದೆ. ಬೆಂಗಳೂರಿನಲ್ಲೂ ಇಂದು ಸಂಪೂರ್ಣ ಬಿಸಿಲಿನ ವಾತಾವರಣವಿರಲಿದೆ. ಹಾಗಿದ್ದರೂ ಚಳಿಯ ವಾತಾವರಣ ಮುಂದುವರಿಯಲಿದೆ.
ವಾರದ ಆರಂಭಕ್ಕೆ ಹೋಲಿಸಿದರೆ ಚಳಿ ಕೊಂಚ ಕಡಿಮೆಯಾಗಲಿದೆ. ಇಂದು ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 17 ಡಿಗ್ರಿಯಷ್ಟಿರಲಿದೆ. ರಾಜ್ಯದಲ್ಲಿ ಸರಾಸರಿ ಕನಿಷ್ಠ ತಾಪಮಾನ 28 ಡಿಗ್ರಿಯಷ್ಟಿರಲಿದ್ದು, ಕನಿಷ್ಠ ತಾಪಮಾನ ಸರಾಸರಿ 17 ಡಿಗ್ರಿಯಷ್ಟಿರಲಿದೆ.