Select Your Language

Notifications

webdunia
webdunia
webdunia
webdunia

Karnataka Weather: ಈ ಬಾರಿ ಬೇಸಿಗೆ ಹೇಗಿರಲಿದೆ, ಹವಾಮಾನ ತಜ್ಞರ ಎಚ್ಚರಿಕೆ ಗಮನಿಸಿ

Bangalore weather

Krishnaveni K

ಬೆಂಗಳೂರು , ಶುಕ್ರವಾರ, 23 ಜನವರಿ 2026 (08:35 IST)
ಬೆಂಗಳೂರು: ಈ ಬಾರಿ ಚಳಿಗಾಲದಲ್ಲಿ ಭಯಂಕರ ಚಳಿ, ಮಳೆಗಾಲದಲ್ಲಿ ಭಾರೀ ಮಳೆಯಿತ್ತು. ಬೇಸಿಗೆ ಕಾಲ ಹೇಗಿರಲಿದೆ? ಹವಾಮಾನ ತಜ್ಞರು ಏನು ಹೇಳುತ್ತಾರೆ ನೋಡಿ.

ಈ ವರ್ಷ ಎಲ್ಲವೂ ಅತೀ ಎನಿಸುವಂತಿತ್ತು. ಮಳೆಗಾಲ ಅಬ್ಬರವೂ ಜೋರಾಗಿಯೇ ಇತ್ತು. ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲಿ ದಾಖಲೆಯ ಭಾರೀ ಮಳೆಯಾಗಿತ್ತು. ಅಕ್ಟೋಬರ್ ವರೆಗೂ ಧಾರಾಕಾರ ಮಳೆ ಕಂಡುಬಂದಿತ್ತು.

ಚಳಿಗಾಲವೂ ಕೆಲವು ಜಿಲ್ಲೆಗಳಲ್ಲಿ ದಾಖಲೆಯ ಮಟ್ಟಕ್ಕೆ ತಾಪಮಾನ ಕುಸಿತ ಕಂಡುಬಂದಿತ್ತು. ಈ ಬಾರಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲೂ ವಿಪರೀತ ಎನಿಸುವಷ್ಟು ಚಳಿಯಿತ್ತು. ಆದರೆ ಚಳಿಗಾಲ ಇನ್ನೇನು ಕೆಲವೇ ದಿನಗಳಲ್ಲಿ ಕೊನೆಯಾಗಲಿದೆ.

ಈ ಬಾರಿ ಬೇಸಿಗೆಯೂ ವಿಪರೀತ ಎನಿಸುವಷ್ಟು ಸುಡಲಿದೆ ಎನ್ನುತ್ತಾರೆ ಹವಾಮಾನ ತಜ್ಞರು. ಫೆಬ್ರವರಿಯಿಂದಲೇ ಹಗಲು ವಿಪರೀತ ಬಿಸಿಲು ಕಂಡುಬರಲಿದೆ. ಚಳಿಗಾಲ ತೀವ್ರವಾಗಿದ್ದರಿಂದ ಬೇಸಿಗೆಯೂ ಈ ಬಾರಿ ತೀವ್ರವಾಗಿರಲಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ. ಕಳೆದ ಬಾರಿಗಿಂತಲೂ ಈ ಬಾರಿ ಸೂರ್ಯನ ಶಾಖ ಹೆಚ್ಚು ಮೈಸುಡಲಿದೆ ಎಂಬ ಎಚ್ಚರಿಕೆ ನೀಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮನ್ರೇಗಾ ಬಗ್ಗೆ ರಾಜ್ಯಪಾಲರ ಮೂಲಕ ಸುಳ್ಳು ಹೇಳಿಸಲು ಕಾಂಗ್ರೆಸ್ ಸರ್ಕಾರ ಹೊರಟಿತ್ತು: ಶಿವರಾಜ್ ಸಿಂಗ್ ಚೌಹಾಣ್