Publish Date: Sat, 06 Aug 2022 (10:53 IST)
Updated Date: Sat, 06 Aug 2022 (10:22 IST)
ನವದೆಹಲಿ: ಶಿಕ್ಷಕರನ್ನು ದೇವರಂತೆ ಪೂಜಿಸುವ ಪರಂಪರೆ ನಮ್ಮದು. ಆದರೆ ಇತ್ತೀಚೆಗೆ ಕೆಲವು ಘಟನೆಗಳನ್ನು ನೋಡುತ್ತಿದ್ದರೆ ಶಿಕ್ಷಕರ ಮೇಲೆ ಅನುಮಾನದ ದೃಷ್ಟಿಯಿಂದ ನೋಡುವಂತಾಗಿದೆ. ಗುಜರಾತ್ ನಲ್ಲಿ ಅಂತಹದ್ದೇ ಘಟನೆಯೊಂದು ನಡೆದಿದೆ.
10 ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳ ಮೇಲೆ ಹಲ್ಲೆ ನಡೆಸಿದ ಶಿಕ್ಷಕ ಬಳಿಕ ಆಕೆಗೆ ಜೊತೆಯಾಗಿ ಕುಳಿತು ವೋಡ್ಕಾ ಕುಡಿಯೋಣ ಎಂದು ಬಲವಂತ ಮಾಡಿದ್ದಾನೆ.
ಟ್ಯೂಷನ್ ಗೆ ಬರುತ್ತಿದ್ದ ವಿದ್ಯಾರ್ಥಿನಿಗೆ ಹಲ್ಲೆ ಮಾಡಿ ಬಲವಂತವಾಗಿ ಮದ್ಯಕುಡಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಶಿಕ್ಷಕ ಆಕೆಯನ್ನು ಮನೆಗೆ ಕರೆತಂದು ಬಿಟ್ಟಿದ್ದಾನೆ. ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದು ಪೊಲೀಸರಿಗೆ ದೂರು ನೀಡಿದ್ದರು. ಎಚ್ಚರವಾದ ಬಳಿಕ ಬಾಲಕಿ ನಡೆದ ವಿಚಾರವನ್ನು ಪೊಲೀಸರಿಗೆ ವಿವರಿಸಿದ್ದಾಳೆ. ಇದೀಗ ಆರೋಪಿ ಶಿಕ್ಷಕನನ್ನು ಬಂಧಿಸಲಾಗಿದೆ.