Publish Date: Wed, 03 Aug 2022 (08:40 IST)
Updated Date: Wed, 03 Aug 2022 (09:11 IST)
ಕೊಯಮತ್ತೂರು: ಚಾಕಲೇಟ್ ಕವರ್ ನಲ್ಲಿ ಗಾಂಜಾ ಸುತ್ತಿ ಮಾರಾಟ ಮಾಡುತ್ತಿದ್ದ 58 ವರ್ಷದ ವ್ಯಕ್ತಿ ಮತ್ತು ಆತನಿಗೆ ಸಹಾಯ ಮಾಡಿದ 15 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
58 ವರ್ಷದ ವ್ಯಕ್ತಿಯಿಂದ ಸುಮಾರು 2.5 ಕೆ.ಜಿ.ಗಳಷ್ಟು ಚಾಕಲೇಟ್ ನಲ್ಲಿ ಅಡಗಿಸಿಟ್ಟ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಇದೀಗ ವಶಪಡಿಸಿಕೊಳ್ಳಲಾದ ಚಾಕಲೇಟ್ ಗಳನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.