Publish Date: Sat, 06 Aug 2022 (08:30 IST)
Updated Date: Sat, 06 Aug 2022 (09:00 IST)
ಬೆಂಗಳೂರು: ಹೆತ್ತ ತಾಯಿಯೇ ಮಗಳನ್ನು ಮಹಡಿಯಿಂದ ನೆಲಕ್ಕೆ ತಳ್ಳಿ ಕೊಲೆ ಮಾಡಿರುವ ಧಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ವೃತ್ತಿಯಲ್ಲಿ ದಂತ ವೈದ್ಯೆಯಾಗಿರುವ ತಾಯಿ ತನ್ನ ನಾಲ್ಕು ವರ್ಷದ ಮಗಳನ್ನು ನಾಲ್ಕನೇ ಮಹಡಿಯಿಂದ ಕೆಳಕ್ಕೆ ತಳ್ಳಿ ಕೊಲೆ ಮಾಡಿದ್ದಾಳೆ. ತಂದೆ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು ಮನೆಯಲ್ಲಿರದ ವೇಳೆ ಘಟನೆ ನಡೆದಿದೆ.
ವಿಚಾರಣೆ ನಡೆಸಿದಾಗ ತನ್ನ ಮಗಳಿಗೆ ಮಾತು ಬರುತ್ತಿರಲಿಲ್ಲ, ಮಾನಸಿಕ ಆರೋಗ್ಯವೂ ಸರಿಯಿರಲಿಲ್ಲ. ಹೀಗಾಗಿ ಬೇಸತ್ತು ಮಗಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯೋಜನೆ ಹಾಕಿಕೊ0ಡಿದ್ದೆ ಎಂದು ಆರೋಪಿ ತಾಯಿ ಹೇಳಿದ್ದಾಳೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.