Select Your Language

Notifications

webdunia
webdunia
webdunia
Tuesday, 15 April 2025
webdunia

ಸಂಸತ್ ಸದಸ್ಯತ್ವವನ್ನೇ ಕಳೆದುಕೊಳ್ಳುವ ಭೀತಿಯಲ್ಲಿ ನಟ ಸನ್ನಿ ಡಿಯೋಲ್

ಸನ್ನಿ ಡಿಯೋಲ್
ನವದೆಹಲಿ , ಗುರುವಾರ, 20 ಜೂನ್ 2019 (09:22 IST)
ನವದೆಹಲಿ: ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿ ಪಂಜಾಬ್ ನ ಗುರುದಾಸ್ಪುರದಿಂದ ಲೋಕಸಭಾ ಸದಸ್ಯನಾಗಿ ಆಯ್ಕೆಯಾದ ನಟ ಸನ್ನಿ ಡಿಯೋಲ್ ಇದೀಗ ಸಂಸತ್ ಸದಸ್ಯತ್ವ ರದ್ದಾಗುವ ಭೀತಿಯಲ್ಲಿದ್ದಾರೆ.


ಬಿಜೆಪಿಯಿಂದ ಸ್ಪರ್ಧಿಸಿದ್ದ ಸನ್ನಿ ಡಿಯೋಲ್ ಈಗಾಗಲೇ ಲೋಕಸಭೆಗೆ ಹಾಜರಾಗಿ ಪ್ರಮಾಣ ಸ್ವೀಕರಿಸಿಯೂ ಆಗಿದೆ. ಆದರೆ ಚುನಾವಣೆ ವೇಳೆ ಪ್ರಚಾರಕ್ಕೆ ಬಳಸಲು ನಿಗದಿಯಾಗಿದ್ದ 70 ಲಕ್ಷ ರೂ. ಮೊತ್ತಕ್ಕಿಂತ ಹೆಚ್ಚು ಹಣ ಬಳಕೆ ಮಾಡಿದ ಆರೋಪದಲ್ಲಿ ಅವರ ಸಂಸತ್ ಸದಸ್ಯತ್ವ ಅನರ್ಹವಾಗುವ ಭೀತಿಯಲ್ಲಿದೆ.

ಸನ್ನಿ ಡಿಯೋಲ್ ಒಟ್ಟು 86 ಲಕ್ಷ ರೂ. ವೆಚ್ಚ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಚುನಾವಣಾ ಆಯೋಗ ವಿವರಣೆ ನೀಡುವಂತೆ ಸನ್ನಿ ಡಿಯೋಲ್ ಗೆ ನೋಟಿಸ್ ನೀಡಿದೆ. ವಿಚಾರಣೆಯಲ್ಲಿ ಆರೋಪ ಸಾಬೀತಾದರೆ ಸನ್ನಿ ಡಿಯೋಲ್ ಸದಸ್ಯತ್ವಕ್ಕೆ ಕುತ್ತು ಬರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹರಾಜಾಗುತ್ತಿದೆಯಂತೆ ಪ್ರಸಿದ್ಧ ಚಿತ್ರಕಲೆಗಾರನ ಪ್ರಾಣವನ್ನು ತೆಗೆದ ಈ ರಿವಾಲ್ವರ್