Daily Horoscope

Select Your Language

Notifications

webdunia
webdunia
webdunia
webdunia

ಸಂಸತ್ತಿನಲ್ಲಿ ಮೊದಲ ದಿನ ಸುಮಲತಾ ಅಂಬರೀಶ್ ಗೆ ಭರ್ಜರಿ ಸ್ವಾಗತ

ಸುಮಲತಾ ಅಂಬರೀಶ್
ನವದೆಹಲಿ: ಇದೇ ಮೊದಲ ಬಾರಿಗೆ ಸಂಸದೆಯಾಗಿ ಆಯ್ಕೆಯಾಗಿರುವ ಸುಮಲತಾ ಅಂಬರೀಶ್ ನಿನ್ನೆ ಸಂಸತ್ ಅಧಿವೇಶನದ ಮೊದಲ ದಿನ ಪ್ರಮಾಣ ವಚನ ಸ್ವೀಕರಿಸಿದ್ದು, ಆ ಕ್ಷಣಗಳ ಸಂಭ್ರಮವನ್ನು ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಹಂಚಿಕೊಂಡಿದ್ದಾರೆ.


ನಿನ್ನೆ ನೂತನ ಸಂಸದರ ಪ್ರಮಾಣ ವಚನ ಸ್ವೀಕಾರ ಮತ್ತು ಪ್ರಧಾನಿ ಮೋದಿಯಿಂದ ಮೊದಲ ಭಾಷಣವಿತ್ತು. ಕರ್ನಾಟಕದ ಸಂಸದರು ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಗಮನಸೆಳೆದಿದ್ದರು.

ಈ ವೇಳೆ ಸುಮಲತಾ ಅಂಬರೀಶ್ ಪ್ರಮಾಣ ವಚನ ಸ್ವೀಕರಿಸಲು ಎದ್ದು ನಿಲ್ಲುತ್ತಿದ್ದಂತೆ ಭಾರೀ ಚಪ್ಪಾಳೆ ಕೇಳಿಬಂದಿದ್ದು ವಿಶೇಷವಾಗಿತ್ತು. ಇನ್ನು, ಸುಮಲತಾ ಅಂಬರೀಶ್ ಜತೆಗೆ ಸದಾ ಬೆಂಗಾವಲಾಗಿ ನಿಲ್ಲುವ ರಾಕ್ ಲೈನ್ ವೆಂಕಟೇಶ್ ಮತ್ತು ದೊಡ್ಡಣ್ಣ ಸಂಸತ್ ವರೆಗೂ ಸುಮಲತಾಗೆ ಸಾಥ್ ನೀಡಿದ್ದು ವಿಶೇಷವಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಆಹಾರ ಸೇವನೆಯನ್ನು ನಿಯಂತ್ರಿಸುತ್ತೆ ಈ ಬ್ರೇಸ್​ ಲೈಟ್. ಹೇಗೆ ಗೊತ್ತಾ?