Select Your Language

Notifications

webdunia
webdunia
webdunia
webdunia

ಪಾಕ್ ಮೂಲಕ ವಿಮಾನ ಪ್ರಯಾಣ ನಡೆಸಲು ಒಪ್ಪದ ಪ್ರಧಾನಿ ಮೋದಿ

ಪಾಕ್ ಮೂಲಕ ವಿಮಾನ ಪ್ರಯಾಣ ನಡೆಸಲು ಒಪ್ಪದ ಪ್ರಧಾನಿ ಮೋದಿ
ನವದೆಹಲಿ , ಗುರುವಾರ, 13 ಜೂನ್ 2019 (10:19 IST)
ನವದೆಹಲಿ: ಬಿಷ್ಕೇಕ್ ನಲ್ಲಿ ನಡೆಯಲಿರುವ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನದ ವಾಯುಪ್ರದೇಶ ಮಾರ್ಗವಾಗಿ ವಿಮಾನ ಯಾನ ನಡೆಸದೇ ಇರಲು ಪ್ರಧಾನಿ ಮೋದಿ ತೀರ್ಮಾನಿಸಿದ್ದಾರೆ.


ಈ ಮೊದಲು ಪಾಕ್ ವಾಯುನೆಲೆ ಪ್ರದೇಶವಾಗಿ ಪ್ರಧಾನಿ ವಿಮಾನ ಹಾರಾಟಕ್ಕೆ ಭಾರತ ಸಾಂಪ್ರದಾಯಿಕ ಎದುರಾಳಿ ರಾಷ್ಟ್ರದ ಒಪ್ಪಿಗೆ ಕೇಳಿತ್ತು. ಇದಕ್ಕೆ ಪಾಕ್ ಕೂಡಾ ಒಪ್ಪಿಗೆ ನೀಡಿತ್ತು. ಆದರೆ ಇದೀಗ ಪ್ರಧಾನಿ ಮೋದಿ ಭದ್ರತಾ ತಂಡ ಈ ಮಾರ್ಗವನ್ನು ತಿರಸ್ಕರಿಸಿದೆ.

ಬದಲಾಗಿ ಒಮನ್ ಮಾರ್ಗವಾಗಿ ಪ್ರಧಾನಿ ಮೋದಿ ಪ್ರಯಾಣಿಸಲಿರುವ ವಿಮಾನ ಕಿರ್ಗಿಸ್ತಾನದ ರಾಜಧಾನಿ ಬಿಷ್ಕೇಕ್ ತಲುಪಲಿದೆ. ಅಷ್ಟೇ ಅಲ್ಲದೆ, ಶೃಂಗ ಸಭೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕೂಡಾ ಭಾಗವಹಿಸಲಿದ್ದಾರೆ. ಆದರೆ ಈ ಸಂದರ್ಭದಲ್ಲಿ ಅವರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸುವ ಯಾವುದೇ ಯೋಜನೆ ಪ್ರಧಾನಿ ಕಾರ್ಯಕ್ರಮ ಪಟ್ಟಿಯಲ್ಲಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ಮೂಲಕ ವಿಮಾನ ಪ್ರಯಾಣ ನಡೆಸಲು ಒಪ್ಪದ ಪ್ರಧಾನಿ ಮೋದಿ