Select Your Language

Notifications

webdunia
webdunia
webdunia
webdunia

ಮಾತುಕತೆ ಮಾಡಿ ಎಂದು ಭಾರತದ ಹಿಂದೆ ಇನ್ಮುಂದೆ ಅಲೆಯಲ್ಲ: ಪಾಕ್ ಆಕ್ರೋಶ

ಮಾತುಕತೆ ಮಾಡಿ ಎಂದು ಭಾರತದ ಹಿಂದೆ ಇನ್ಮುಂದೆ ಅಲೆಯಲ್ಲ: ಪಾಕ್ ಆಕ್ರೋಶ
ನವದೆಹಲಿ , ಶುಕ್ರವಾರ, 14 ಜೂನ್ 2019 (09:31 IST)
ನವದೆಹಲಿ: ಶಾಂಘೈ ಶೃಂಗ ಸಭೆಯಲ್ಲಿ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ನಿರಾಕರಿಸಿರುವ ಭಾರತದ ಕ್ರಮದಿಂದ ಸಿಟ್ಟಿಗೆದ್ದಿರುವ ಪಾಕಿಸ್ತಾನ ಇನ್ಮುಂದೆ ಭಾರತದೊಂದಿಗೆ ಶಾಂತಿ ಮಾತುಕತೆ ನಡೆಸೋಣ ಎಂದು ಅಲೆಯೋದಿಲ್ಲ ಎಂದಿದೆ.


ಕಿರ್ಗಿಸ್ತಾನದ ಬಿಷ್ಕೇಕ್ ನಲ್ಲಿ ನಡೆಯುತ್ತಿರುವ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಭಾರತದ ಪ್ರಧಾನಿ ಮೋದಿ ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಈಗಾಗಲೇ ಇಲ್ಲಿಗೆ ಬಂದು ಸೇರಿದ್ದಾರೆ. ಈ ಶೃಂಗ ಸಭೆಗೂ ಮೊದಲು ಪಾಕ್ ಭಾರತದ ಬಳಿ ಶಾಂತಿ ಮಾತುಕತೆಗೆ ಆಹ್ವಾನ ನೀಡಿತ್ತು. ಆದರೆ ಭಾರತ ಇದನ್ನು ತಿರಸ್ಕರಿಸಿರುವುದು ಪಾಕ್ ಸಿಟ್ಟಿಗೆ ಕಾರಣವಾಗಿದೆ.

ಪ್ರತೀ ಬಾರಿ ಮಾತುಕತೆ ನಡೆಸಿದರೂ ಪಾಕ್ ಗಡಿಯಾಚೆಗಿನ ಭಯೋತ್ಪಾನೆ ಮಾತ್ರ ನಿಲ್ಲಿಸುವುದಿಲ್ಲವೆಂಬ ಕಾರಣಕ್ಕೆ ಭಾರತ ಇದೊಂದು ವ್ಯರ್ಥ ಮಾತುಕತೆ ಎಂಬ ತೀರ್ಮಾನಕ್ಕೆ ಬಂದಿದೆ. ಆದರೆ ಭಾರತದ ತೀರ್ಮಾನಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಪಾಕ್ ವಿದೇಶಾಂಗ ಸಚಿವ ಮೊಹಮ್ಮದ್ ಖುರೇಷಿ ‘ಭಾರತ ಸರ್ಕಾರ ಇನ್ನೂ ಚುನಾವಣೆ ಗುಂಗಿನಿಂದ ಹೊರಬಂದಂತೆ ಕಾಣುತ್ತಿಲ್ಲ. ಆ ದೇಶದ ಪ್ರಧಾನಿಗೆ ನಮ್ಮ ವಾಯುನೆಲೆ ಮೂಲಕ ಕಿರ್ಗಿಸ್ತಾನಕ್ಕೆ ತೆರಳಲು ಒಪ್ಪಿಗೆ ನೀಡಿದ್ದೆವು. ಹಾಗಿದ್ದರೂ ಅವರು ಅದನ್ನು ಬಳಸಲಿಲ್ಲ. ಇದರ ಅರ್ಥವೇನು? ಅವರು ಇನ್ನೂ ಹಿಂದುತ್ವ ಗುಂಗಿನಲ್ಲಿದ್ದಾರೆ. ನಮ್ಮ ಜತೆ ಮಾತುಕತೆ ನಡೆಸಿದರೆ ತಮ್ಮ ಮತಬ್ಯಾಂಕ್ ಗೆ ತೊಂದರೆಯಾಗಬಹುದು ಎಂಬ ಗುಂಗಿನಲ್ಲಿದ್ದಾರೆ’ ಎಂದು ಖುರೇಷಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರಡಿ ಮರಿಯನ್ನು ನಾಯಿ ಎಂದು ಸಾಕಿ ಸಂಕಷ್ಟಕ್ಕೀಡಾದ ಮಲೇಷ್ಯಾ ಗಾಯಕಿ