Publish Date: Wed, 09 Sep 2020 (11:53 IST)
Updated Date: Wed, 09 Sep 2020 (11:55 IST)
ಲಕ್ನೋ: ಮಲತಾಯಿಯೊಬ್ಬಳು ತನ್ನ ಮಲಮಕ್ಕಳಿಗೆ ಬಲವಂತವಾಗಿ ಡ್ರಗ್ಸ್ ನೀಡಿ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಈ ಸಂಬಂಧ ಸಂತ್ರಸ್ತರು ಪೊಲೀಸರಿಗೆ ದೂರು ನೀಡಿದ್ದು ಮಹಿಳೆಯನ್ನು ಬಂಧಿಸಲಾಗಿದೆ. ಮೂವರು ಹೆಣ್ಣು ಮಕ್ಕಳ ತಂದೆ ಇತ್ತೀಚೆಗಷ್ಟೇ ಮಹಿಳೆಯನ್ನು ಮದುವೆಯಾಗಿದ್ದ. ಮದುವೆ ಬಳಿಕ ವೃತ್ತಿಯಲ್ಲಿ ನರ್ಸ್ ಆಗಿರುವ ಮಹಿಳೆ ತನ್ನ ಮಲಮಕ್ಕಳಿಗೆ ಆರೋಗ್ಯ ವೃದ್ಧಿಸುವ ನೆಪದಲ್ಲಿ ಡ್ರಗ್ಸ್ ನೀಡುತ್ತಿದ್ದಳು. ಬಳಿಕ ಲೈಂಗಿಕವಾಗಿ ಹಿಂಸೆ ನೀಡುತ್ತಿದ್ದಳಲ್ಲದೆ, ಅಶ್ಲೀಲ ವಿಡಿಯೋಗಳನ್ನು ತೋರಿಸುತ್ತಿದ್ದಳು ಎಂದು ಹಿರಿಯ ಪುತ್ರಿ ಪೊಲೀಸರಿಗೆ ದೂರು ನೀಡಿದ್ದಾಳೆ.