Publish Date: Tue, 08 Sep 2020 (09:42 IST)
Updated Date: Tue, 08 Sep 2020 (09:43 IST)
ಲಕ್ನೋ: ಬರ್ತ್ ಡೇ ಪಾರ್ಟಿಗೆ ಕರೆದು ಸ್ನೇಹಿತರೇ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಯುವತಿಯೊಬ್ಬಳು ಪೊಲೀಸರಿಗೆ ದೂರು ನೀಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ವೃತ್ತಿಯಲ್ಲಿ ಬ್ಯುಟಿಷಿಯನ್ ಆಗಿರುವ ಯುವತಿಯನ್ನು ಬರ್ತ್ ಡೇ ಪಾರ್ಟಿಗೆ ಕರೆದಿದ್ದ ಸ್ನೇಹಿತರು ಆಕೆಗೆ ಬಲವಂತವಾಗಿ ಮದ್ಯ ಕುಡಿಸಿ ಮಾನಭಂಗ ಮಾಡಿದ್ದಾರೆ. ಮದ್ಯದ ನಶೆಯಿಂದ ಎಚ್ಚರವಾದ ಬಳಿಕ ತನ್ನ ಸ್ಥಿತಿ ಅರಿತ ಯುವತಿ ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಇದೀಗ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.