Publish Date: Fri, 22 Apr 2022 (13:16 IST)
Updated Date: Fri, 22 Apr 2022 (19:18 IST)
ಚಂಡೀಗಢ : ಪಂಜಾಬ್ ಮಾಫಿಯಾ ರಾಜ್ಯವಾಗಿದ್ದರಿಂದ ಕಾಂಗ್ರೆಸ್ ಸೋತಿದೆ.
ಅದು ಈಗ ತನ್ನನ್ನು ತಾನು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ ಎಂದು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಜಾಬಿನ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಪ್ರಾಮಾಣಿಕ ವ್ಯಕ್ತಿಯಾಗಿದ್ದಾರೆ. ಇದರಿಂದಾಗಿ ಮಾಫಿಯಾ ವಿರುದ್ಧ ಆಪ್ ಪಕ್ಷ ಹೋರಾಡಾವುದಾದರೆ ಬೆಂಬಲಿಸುವುದಾಗಿ ಹೇಳಿದರು.
ಈ ಮೊದಲು ನಾನು ಮಾತನಾಡಲಿಲ್ಲ. ಆದರೆ ಎಲ್ಲರಿಗೂ ಮಾತನಾಡುವ ಹಕ್ಕಿದೆ. ಐದು ವರ್ಷಗಳ ಮಾಫಿಯಾ ರಾಜ್ನ ಆಡಳಿತದಿಂದಾಗಿ ಕಾಂಗ್ರೆಸ್ ಸೋತಿದೆ ಎಂದ ಅವರು, ಮಾಫಿಯಾ ವಿರುದ್ಧ ಸದಾ ಹೋರಾಟ ನಡೆಸಿದ್ದೇನೆ.
ನನ್ನ ಹೋರಾಟ ಯಾವುದೇ ವ್ಯಕ್ತಿಯ ವಿರುದ್ಧ ಅಲ್ಲ, ಇದು ವ್ಯವಸ್ಥೆಯ ವಿರುದ್ಧವಾಗಿದೆ. ಗೆದ್ದಲುಗಳಂತೆ ರಾಜ್ಯವನ್ನು ತಿನ್ನುತ್ತಿರುವ ಕೆಲವು ವ್ಯಕ್ತಿಗಳ ವಿರುದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.