Publish Date: Wed, 20 Apr 2022 (20:45 IST)
Updated Date: Wed, 20 Apr 2022 (20:47 IST)
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕನಪುರದವರಾಗಿದ್ದಾರೆ. ಅವರು ಕಾಂಗ್ರೆಸ್ ಏಜೆಂಟ್ ಹಾಗೂ ಕಾಂಗ್ರೆಸ್‍ದಾಸ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅವರ ಜೊತೆ ಸೇರಿ ಸ್ವಾಮೀಜಿ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಕಮಿಷನ್ ಆರೋಪ ಮಾಡಿದ್ದಾರೆ. ಈ ಆರೋಪವನ್ನು ಸಾಬೀತು ಪಡಿಸಲು ನಿಮ್ಮ ಬಳಿ ಒಂದೇ ಒಂದು ದಾಖಲೆ ಇದ್ದರೆ ಕೊಡಿ. ದಾರಿಯಲ್ಲಿ ಹೋಗೋ ದಾಸರೆಲ್ಲಾ ಆರೋಪ ಮಾಡ್ತಾರೆ ಎಂದು ವಾಗ್ದಾಳಿ ನಡೆಸಿದರು.ಕೋಮು ಗಲಭೆ ಉಂಟು ಮಾಡೋದು ಹಾಗೂ ಸರ್ಕಾರದ ವಿರುದ್ಧ ಪರ್ಸಂಟೇಜ್ ಬಗ್ಗೆ ಆರೋಪ ಮಾಡುವುದನ್ನು ಸಿದ್ದರಾಮಯ್ಯ, ಡಿಕೆಶಿ ಅವರು ದಿನ ಇದೇ ಉದ್ಯೋಗ ಮಾಡಿಕೊಂಡಿದ್ದಾರೆ ಎಂದರು