Publish Date: Tue, 19 Apr 2022 (21:17 IST)
Updated Date: Tue, 19 Apr 2022 (21:20 IST)
ಎತ್ತಿನಹೊಳೆ ಯೋಜನೆಯಿಂದ 2 ವರ್ಷದಲ್ಲಿ ಕೋಲಾರ-ಚಿಕ್ಕಬಳ್ಳಾಪುರ-ಬೆಂಗಳೂರು ಗ್ರಾಮಾಂತರಕ್ಕೆ ನೀರು ಕೊಡುವ ಕೆಲಸ ಮಾಡ್ತೀನಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ನಮಗೆ ಭರವಸೆ ನೀಡಿದ್ದಾರೆ. ಆ ಭರವಸೆಯನ್ನ ನಾನು ನಂಬಿದ್ದೇನೆ ಎಂದು ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ. ರಾಜ್ಯ ಸರ್ಕಾರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ ವಿಚಾರವಾಗಿ, ಚುನಾವಣೆಗಳು ಹತ್ತಿರ ಇರುವಾಗ ವಿಪಕ್ಷಗಳ ಹೋರಾಟ ಸ್ವಾಭಾವಿಕ. ಆದ್ರೆ ಅವರು ಸಾಗುತ್ತಿರುವ ಹಾದಿ ತಪ್ಪು. ಕಾಂಗ್ರೆಸ್ನವರು ತಪ್ಪು ದಾರಿ ಹಿಡಿದಿದ್ದಾರೆ. ರಾಜ್ಯ ಸುಸಂಸ್ಕೃತ ರಾಜಕಾರಣಕ್ಕೆ ಮಾದರಿಯಾಗಿದೆ. ಆ ಹಾದಿ ಹಿಡಿದ್ರೆ ಒಳ್ಳೆಯದಾಗುತ್ತೆ, ತಪ್ಪು ದಾರಿ ಹಿಡಿದರೆ ಹಳ್ಳ ಹಿಡಿಯೋದು ಗ್ಯಾರಂಟಿ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ಧಾರೆ.